ಅಗತ್ಯ ವಸ್ತುಗಳ ಪಟ್ಟಿಯಿಂದ ಅಕ್ಕಿ, ಬೇಳೆಕಾಳುಗಳು ಔಟ್; ಅನ್ನದಾತ ಫುಲ್ ಶಾಕ್!

ಕೃಷಿ ಮಸೂದೆ ಬಳಿಕ ಕೇಂದ್ರ ಸರ್ಕಾರ ರೈತರಿಗೆ ಇನ್ನೊಂದು ಶಾಕ್ ನೀಡಿದೆ. ಅವಶ್ಯಕ ವಸ್ತುಗಳ ಪಟ್ಟಿಯಿಂದ ಅಕ್ಕಿ, ರಾಗಿ, ಬೇಳೆ ಕಾಳುಗಳು, ಎಣ್ಣೆ ಬೀಜಗಳು, ಝಾದ್ಯ ತೈಲ, ಈರುಳ್ಳಿ, ಆಲೂಗಡ್ಡೆಯನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡಲಾಗಿದೆ.

First Published Sep 23, 2020, 11:35 AM IST | Last Updated Sep 23, 2020, 11:44 AM IST

ಬೆಂಗಳೂರು (ಸೆ. 23): ಕೃಷಿ ಮಸೂದೆ ಬಳಿಕ ಕೇಂದ್ರ ಸರ್ಕಾರ ರೈತರಿಗೆ ಇನ್ನೊಂದು ಶಾಕ್ ನೀಡಿದೆ. ಅವಶ್ಯಕ ವಸ್ತುಗಳ ಪಟ್ಟಿಯಿಂದ ಅಕ್ಕಿ, ರಾಗಿ, ಬೇಳೆ ಕಾಳುಗಳು, ಎಣ್ಣೆ ಬೀಜಗಳು, ಝಾದ್ಯ ತೈಲ, ಈರುಳ್ಳಿ, ಆಲೂಗಡ್ಡೆಯನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡಲಾಗಿದೆ.

ಶುಕ್ರವಾರ ಕರ್ನಾಟಕ ಬಂದ್ ಇಲ್ಲ; ಬೇರೆ ರೀತಿಯಲ್ಲಿ ಪ್ರತಿಭಟನೆಗೆ ಮುಂದಾದ ರೈತ ಸಂಘಟನೆಗಳು

ಈ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಇದಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದರೆ ಈ ಎಲ್ಲಾ ಆಹಾರೋತ್ಪನ್ನಗಳು ಸರ್ಕಾರದ ದರ ನಿಯಂತ್ರಣದಿಂದ ಮುಕ್ತಿ ಹೊಂದಲಿವೆ.  ವಿಶೇಷ ಸಂದರ್ಭದಲ್ಲಿ ಮಾತ್ರ ಸರ್ಕಾರ ಬೆಲೆ ನಿಯಂತ್ರಿಸುತ್ತದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ರೈತರ ಆದಾಯ ದ್ವಿಗುಣಗೊಳಿಸುವ ಗುರಿ ನಮ್ಮದು. ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತಂದಂತಾಗುತ್ತದೆ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.