ಲಸಿಕೆ ನೀಡಿಕೆಯಲ್ಲಿ ಭಾರತ ಟಾಪ್.. ಕೊರೋನಾ ಕಂಟ್ರೋಲ್ ಕೇರಳ ಮಾಡೆಲ್ ಫ್ಲಾಪ್
* ಅತಿದೊಡ್ಡ ಲಸಿಕಾ ಅಭಿಯಾನದಲ್ಲಿ ದಾಖಲೆ ಬರೆದ ಭಾರತ
* 60 ಕೋಟಿ ಜನರಿಗೆ ಲಸಿಕೆ ನೀಡಿದ ಭಾರತ
* ಕೇರಳದಲ್ಲಿ ಕಂಟ್ರೋಲ್ ಗೆ ಬಾರದ ಕೊರೋನಾ
* ಕೊರೋನಾ ಕಂಟ್ರೋಲ್ ನಲ್ಲಿ ಕೇರಳ ಮಾಡೆಲ್ ಫ್ಲಾಫ್!
ಬೆಂಗಳೂರು(ಆ. 25) ಭಾರತದ ಅತಿದೊಡ್ಡ ಲಸಿಕಾ ಕಾರ್ಯಕ್ರಮ ದೊಡ್ಡದೊಂದು ಯಶಸ್ಸು ಸಾಧಿಸಿದೆ. ಅತಿ ವೇಗವಾಗಿ 60 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಕಟಕದ ಪಕ್ಕದ ರಾಜ್ಯ ಕೇರಳದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಪಾಸಿಟಿವಿಟಿ ರೇಟ್ ಹೆಚ್ಚಿದ್ದು ಚಿಂತೆಗೆ ಕಾರಣವಾಗಿದೆ.
ಮೊದಲನೇ ಅಲೆ ಬಂದಾಗ ಅತ್ಯಂತ ಕಟ್ಟುನಿಟ್ಟಾಗಿ ಕೊರೋನಾ ಕಂಟ್ರೋಲ್ ಮಾಡಿದ್ದ ಕೇರಳ ಈಗ ಸಂಪೂರ್ಣ ವಿಫಲವಾಗಿದೆ. ಕೇರಳ ಮಾಡೆಲ್ ಹಳ್ಳ ಹಿಡಿದಿದೆ. ಕರ್ನಾಟಕ ಮತ್ತು ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿಯೂ ಕೊರೋನಾ ಕಂಟ್ರೋಲ್ ನಲ್ಲಿದೆ. ಮೈಸೂರಿನಲ್ಲಿ ಕಮಲ ಅರಳಿದೆ. ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ವಿವಿಧ ಇಲಾಖೆಗಳಿಗೆ ಹಂಗಾಮಿ ಸಚಿವರನ್ನು ನೇಮಿಸಿದ್ದಾರೆ.