Asianet Suvarna News Asianet Suvarna News

UP Elections: ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ, ಜನರ ಗಲಾಟೆ!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಈ ಬಾರಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿರುವ ಆರೋಪ ಕೇಳಿ ಬಂದಿದೆ. ಮತದಾರರು ಮತ ಚಲಾಯಿಸಲು ತಮ್ಮ ಬೂತ್‌ಗೆ ಬಂದಾಗ, ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಅವರು ಹಿಂತಿರುಗಿದ ಘಟನೆಗಳು ಸಾಕಷ್ಟು ನಡೆದಿವೆ.  

First Published Feb 27, 2022, 12:53 PM IST | Last Updated Feb 27, 2022, 12:53 PM IST

ಲಕ್ನೋ(ಫೆ.27): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಈ ಬಾರಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿರುವ ಆರೋಪ ಕೇಳಿ ಬಂದಿದೆ. ಮತದಾರರು ಮತ ಚಲಾಯಿಸಲು ತಮ್ಮ ಬೂತ್‌ಗೆ ಬಂದಾಗ, ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಅವರು ಹಿಂತಿರುಗಿದ ಘಟನೆಗಳು ಸಾಕಷ್ಟು ನಡೆದಿವೆ.  ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಮತದಾರರು ಆಕ್ರೋಶ  ವ್ಯಕ್ತಪಡಿಸಿದ್ದು,  ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ನಿರ್ಲಕ್ಷ್ಯ ತೋರಿರುವುದು ಸ್ಪಷ್ಟವಾಗಿದೆ. ಪಟ್ಟಿಯಲ್ಲಿ ಹೆಸರು ಇಲ್ಲದಿರುವುದರಿಂದ ಜನರು ಮತದಾನ ಮಾಡಲು ಸಾಧ್ಯವಾಗಲಿಲ್ಲ. ಷಡ್ಯಂತ್ರದ ಭಾಗವಾಗಿ ಹೆಸರುಗಳನ್ನು ತೆಗೆಯಲಾಗಿದೆ ಎಂದೂ ಹಲವರು ಆರೋಪಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಮತ ಹಾಕಿದ್ದೆವು, ಆದರೆ ಈ ಬಾರಿ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಮತದಾನ ಮಾಡಲು ಸಾಧ್ಯವಾಗದೆ ಬೂತ್‌ಗಳಿಂದ ನಿರಾಸೆಯಿಂದ ವಾಪಸಾಗಿದ್ದಾರೆ. ಅದೇ ರೀತಿ ಕಾಕೋರಿಯ 15 ಬೂತ್‌ಗಳಲ್ಲಿ 400 ಮತದಾರರ ಹೆಸರು ನಾಪತ್ತೆಯಾಗಿದೆ. ಈ ವಿಚಾರವಾಗಿ ಬಿಎಲ್ ಒ ಹಾಗೂ ಮತದಾರರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. 

ಧಂಪುರದ ಫೂಲ್ ಬಾಗ್ ಕಾಲೋನಿಯ ಮಾಜಿ ಸೇನಾ ಅಧಿಕಾರಿ ಕುಶಾಲ್ ಪಾಲ್ ಸಿಂಗ್ ಅವರ ವಯಸ್ಸು 75 ವರ್ಷ. ಇಲ್ಲಿಯವರೆಗೆ ಪ್ರತಿ ಬಾರಿ ಅವರು ಮತ ಚಲಾಯಿಸಿದ್ದಾರೆ. ಈ ಬಾರಿಯೂ ಅವರು ಮತ ಚಲಾಯಿಸಲು ಬೂತ್‌ಗೆ ಆಗಮಿಸಿದ್ದರು. ಅದರೆ ಮತದಾರರ ಪಟ್ಟಿಯಲ್ಲಿ ಅವರ ಹೆಸರೇ ನಾಪತ್ತೆಯಾಗಿದೆ. ಅಧಿಕಾರಿಗಳಿಗೆ ದೂರು ನೀಡಿದರೂ ಕೇಳುವವರಿಲ್ಲ. ಧಂಪುರದ ಸಕ್ಕರೆ ಕಾರ್ಖಾನೆಯ ನಿವಾಸಿ ಪೂನಂ ಶರ್ಮಾ ಅವರು ತಮ್ಮ ಹೆಸರು ಮತದಾರರ ಪಟ್ಟಿಯಿಂದ ಕಾಣೆಯಾಗಿದೆ ಎಂದು ಹೇಳಿದರು. ಆದರೆ ಇಲ್ಲಿಯವರೆಗೆ ಇದು ಸಂಭವಿಸಿಲ್ಲ. ರಾಹಿ ಗ್ರಾಮದ ಅಭಿಷೇಕ್ ಜೈಸ್ವಾಲ್, ಮೋನಿ, ಲವ್ಕುಶ್, ಶ್ಯಾಂಪತಿ, ಬಲರಾಮ್, ನನ್ಹೆ, ರವೀಂದ್ರ, ಮುಖೇಶ್, ಭಟ್ಪುರ್ವಾ ಗ್ರಾಮದ ಸಂಜಯ್ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣ ಅವರು ಮತದಾನ ಮಾಡಲು ಸಾಧ್ಯವಾಗಲಿಲ್ಲ. ಬಚ್ರವಾನ್ ಪ್ರತಿನಿಧಿ ಪ್ರಕಾರ, ಮುಖ್ಯ ಚೌಕದ ನಿವಾಸಿ ವ್ಯಾಪಾರ ಮಂಡಳಿ ಅಧ್ಯಕ್ಷ ಸುನಿಲ್ ಸಾಗರ್ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ವಾರ್ಡ್ ನಂ.10ರ ರಾಮ್ ಅವತಾರ್, ರಾಹುಲ್ ಸೋನಿ, ಮೊಹಮ್ಮದ್ ಕಲೀಂ, ಮೊಹಮ್ಮದ್ ನದೀಮ್ ಸೇರಿದಂತೆ ಹಲವು ಮತದಾರರ ಹೆಸರು ಪಟ್ಟಿಯಲ್ಲಿ ನಾಪತ್ತೆಯಾಗಿತ್ತು.

ಹೈ ಪ್ರೊಫೈಲ್ ಹೆಸರುಗಳಲ್ಲಿ ಉಪಮುಖ್ಯಮಂತ್ರಿ ಡಾ.ದಿನೇಶ್ ಶರ್ಮಾ ಅವರ ಚಿಕ್ಕಪ್ಪ ಕೈಲಾಶ್ ಚಂದ್ರ ಶರ್ಮಾ ಮತ್ತು ಕವಿ ಮುನವ್ವರ್ ರಾಣಾ ಅವರ ಹೆಸರು ಕಾಣೆಯಾಗಿದೆ. ಬಿಕೆಟಿ ವಿಧಾನಸಭೆಯ ರೇವಮೌ ಗ್ರಾಮದಲ್ಲಿ ಬಿಎಲ್‌ಒ ನಿರ್ಲಕ್ಷ್ಯದಿಂದ 250 ಮತದಾರರ ಹೆಸರು ಮತದಾರರ ಪಟ್ಟಿಯಿಂದ ಮಾಯವಾಗಿದೆ.  ಲಕ್ನೋದಲ್ಲಿ ಖ್ಯಾತ ಕವಿ ಮುನವ್ವರ್ ರಾಣಾ ಅವರ ಹೆಸರೂ ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ. ಹೆಸರು ಇರದಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದ ಮುನವ್ವರ್ ರಾಣಾ, ‘ಸರ್ಕಾರವೇ ಮತದಾನಕ್ಕೆ ಅವಕಾಶ ನೀಡುತ್ತಿಲ್ಲ ಎಂದಾದಲ್ಲಿ ಇನ್ನೇನು ದುಸ್ಥಿತಿ...’ ಎಂದು ಆಕ್ರೋಶ ಹೊರಹಾಕಿದ್ದಾರೆ