ಪ್ರತಿಭಟನೆಯಲ್ಲಿ ಪಾಕ್ ಮುರ್ದಾಬಾದ್ ನಡುವೆ ಜಿಂದಾಬಾದ್, 2 ವರ್ಷದ ಹಳೇ ಪ್ರಕರಣಕ್ಕೆ ಮರುಜೀವ!
2022ರ ವಿಡಿಯೋ, 2 ವರ್ಷದ ಬಳಿಕ ಪ್ರಕರಣ ದಾಖಲಿಸಿ ಅರೆಸ್ಟ್, ಪಾಕ್ ಪರ ಘೋಷಣೆ ಕೂಗಿದ ಆರೋಪಿಗಳಿಗೆ ಪಾಸ್ ಕೊಟ್ಟಿದ ನಾಸೀರ್ , ಡಿಕೆ ಶಿವಕುಮಾರ್‌ಗೆ ಬಿಗ್ ರಿಲೀಫ್, ಇಡಿ ಕೇಸ್ ರದ್ದುಗೊಳಿಸಿದ ಸುಪ್ರೀಂ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ವಿಧಾನಸೌದದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇವರಿಗೆ ಪಾಸ್ ನೀಡಿದ್ದು ರಾಜ್ಯಸಭಾ ಸಂಸದ ನಾಸಿರ್. ಇದೀಗ ನಾಸಿರ್ ಅವರನ್ನು ಆರೋಪಿ ನಂಬರ್ 4 ಮಾಡಲು ಬಿಜೆಪಿ ಒತ್ತಾಯಿಸಿದೆ. ಇದೇ ವೇಳೆ ಕಾಂಗ್ರೆಸ್ ಹೊಸ ಅಸ್ತ್ರ ಝಳಪಿಸಿ ಬಿಜೆಪಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಬಿಜೆಪಿ 2 ವರ್ಷದ ಹಿಂದೆ ಪಾಕಿಸ್ತಾನ ವಿರುದ್ಧ ಪ್ರತಿಭಟನೆ ನಡೆಸಿತ್ತು. ಈ ವೇಳೆ ಪಾಕಿಸ್ತಾನ ಮುರ್ದಾಬಾದ್ ನಡುವೆ ಜಿಂದಾಬಾದ್ ಅನ್ನೋ ಘೋಷಣೆಯೂ ಕೇಳಿಬಂದಿದೆ. ಇದೀಗ ಪ್ರಕರಣ ದಾಖಲಿಸಿಕೊಂಡ ಕಾಂಗ್ರೆಸ್ ಸರ್ಕಾರ ಓರ್ವ ಬಿಜೆಪಿ ಕಾರ್ಯಕರ್ತನ ಬಂಧಿಸಿದೆ.