ಮೂರನೇ ಬಾರಿ ಮೋದಿ ಸರ್ಕಾರ, ಇಸ್ ಬಾರ್ 399 ಎಂದ ಲೋಕಸಭಾ ಚುನಾವಣೆ ಸಮೀಕ್ಷೆ!
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದರ ನಡುವೆ ಇಂಡಿಯಾ ಟಿವಿ ಹಾಗೂ ಸಿಎನ್ಎಕ್ಸ್ ನಡೆಸಿದ ಚುನಾವಣಾ ಸಮೀಕ್ಷೆ ಹೊರಬಿದ್ದಿದೆ. ಮೂರನೇ ಭಾರಿ ಮೋದಿ ಸರ್ಕಾರ ಎಂದಿರುವ ಚುನಾವಣೆ ಸಮೀಕ್ಷೆ 399 ಸ್ಥಾನದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಲಿದೆ ಎಂದಿದೆ. ಇದೇ ವೇಳೆ ಕರ್ನಾಟಕದಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.
ನವದೆಹಲಿ(ಏ.04) ಲೋಕಸಭಾ ಚುನಾವಣೆ ಕಾವು ಜೋರಾಗುತ್ತಿದೆ. ಭರ್ಜರಿ ಪ್ರಚಾರದಲ್ಲಿ ನಾಯಕರು ಬ್ಯೂಸಿಯಾಗಿದ್ದಾರೆ. ಇದರ ನಡುವೆ ಚುನಾವಣೆ ಸಮೀಕ್ಷೆ ಹೊರಬಿದ್ದಿದೆ. ಇಂಡಿಯಾ ಟಿವಿ-ಸಿಎನ್ಎಕ್ಸ್ ನಡೆಸಿದ ಚುನಾವಣಾ ಸಮೀಕ್ಷೆ ಪ್ರಕಟಗೊಂಡಿದೆ. ಈ ಸರ್ವೆ ಮೂರನೇ ಭಾರಿಗೆ ಮೋದಿ ಸರ್ಕಾರ ಎಂದು ಹೇಳುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 399 ಸ್ಥಾನ ಗೆಲ್ಲಲಿದೆ ಎಂದಿದೆ. ಇನ್ನು ದಕ್ಷಿಣ ಭಾರತದಲ್ಲಿ ಬಿಜೆಪಿ ಕೆಲ ಅಚ್ಚರಿಗಳನ್ನು ನೀಡಲಿದೆ ಎಂದಿದೆ. ಕರ್ನಾಟಕದಲ್ಲಿ ಬಿಜೆಪಿ 22 ಸ್ಥಾನಗೆದ್ದರೆ, ಮೈತ್ರಿ ಪಕ್ಷ ಜೆಡಿಎಸ್ 2 ಸ್ಥಾನ ಗೆಲ್ಲಲಿದೆ ಎಂದಿದೆ.