Asianet Suvarna News Asianet Suvarna News

ಮರದ ಕೆಳಗೆ ನಿಂತವರಿಗೆ ಬಡಿದ ಸಿಡಿಲು: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮರದ ಕೆಳಗೆ ನಿಂತಿದ್ದ ತೋಟಗಾರಿಕಾ ಸಿಬ್ಬಂದಿ ಮರಕ್ಕೆ ಬಡಿದ ಸಿಡಿಲಿನಿಂದಾಗಿ ಎಲ್ಲರೂ ದೊಪ ದೊಪನೆ ಕೆಳಗೆ ಬಿದ್ದಿದ್ದಾರೆ. ಹರಿಯಾಣದ ಹರಿಯಾಣದ ಗುರುಗ್ರಾಮ್‌ನ ವಸತಿ ಸೊಸೈಟಿಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಅಗಿದೆ.

Aug 12, 2022, 6:12 PM IST

ಮಳೆ ಬಂದಾಗ ಆಶ್ರಯಕ್ಕಾಗಿ ಮರದ ಕೆಳಗೆ ನಿಲ್ಲುವುದು ಬಹಳ ಅಪಾಯಕಾರಿ. ಮರದ ಕೆಳಗೆ ನಿಂತು ಪ್ರಾಣ ಕಳೆದುಕೊಂಡ ಅನೇಕ ಸುದ್ದಿಗಳನ್ನು ನಾವು ನೋಡಿದ್ದೇವೆ. ಸಾಮಾನ್ಯವಾಗಿ ಮಳೆಯ ಜೊತೆ ಜೊತೆಗೆ ಗುಡುಗು ಮಿಂಚುಗಳು ಬರುತ್ತಿರುತ್ತವೆ. ಮರಗಳಿಗೆ ಸಿಡಿಲು ಬಡಿಯುವುದು ಆಗಾಗ ಕೇಳಿದ್ದೇವೆ. ಅದೇ ರೀತಿ ಇಲ್ಲೊಂದು ಕಡೆ ಮರದ ಕೆಳಗೆ ನಿಂತಿದ್ದ ತೋಟಗಾರಿಕಾ ಸಿಬ್ಬಂದಿ ಮರಕ್ಕೆ ಬಡಿದ ಸಿಡಿಲಿನಿಂದಾಗಿ ಎಲ್ಲರೂ ದೊಪ ದೊಪನೆ ಕೆಳಗೆ ಬಿದ್ದಿದ್ದಾರೆ. ಹರಿಯಾಣದ ಹರಿಯಾಣದ ಗುರುಗ್ರಾಮ್‌ನ ವಸತಿ ಸೊಸೈಟಿಯಲ್ಲಿ ಈ ಘಟನೆ ನಡೆದಿದ್ದು, ಸಿಡಿಲು ಬಡಿಯುತ್ತಿರುವ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಕಳೆದ ವರ್ಷ ನಡೆದಿದ್ದು, ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.