ಯಾರಿದು ಜೆಹುವಾಹ್ಸ್ ವಿಟ್ನೆಸ್..? ಏನಿವರ ಇತಿಹಾಸ..? ಶರಣಾಗುವ ಮುನ್ನ ಹೇಳಿದ್ದೇನು ಮಾರ್ಟಿನ್..?

ಭಯಾನಕ ಬ್ಲಾಸ್ಟ್‌ಗೆ ಬೆಚ್ಚಿಬಿತ್ತು ಕೇರಳ!
ದೇಶದಲ್ಲಿ ಶುರುವಾಯ್ತು ಹೊಸ ಭೀತಿ!
ಹತ್ತಾರು ಪ್ರಶ್ನೆಗಳ ಹುಟ್ಟುಹಾಕಿದೆ ಸ್ಫೋಟ!
 

First Published Oct 31, 2023, 2:35 PM IST | Last Updated Oct 31, 2023, 2:35 PM IST

6 ಪ್ಲಾಸ್ಟಿಕ್ ಕವರ್.. ಜೊತೆಗೆ 8 ಲೀಟರ್ ಪೆಟ್ರೋಲ್.. ರಿಮೋಟ್ ಬಾಂಬ್.. ಇಷ್ಟಕ್ಕೇ ಧಗಧಗ ಅಂತ   ಉರಿಯಿತು ಆ ಪ್ರಾರ್ಥನಾ ಸ್ಥಳ.ಭಾನುವಾರ ಬೆಳಗ್ಗೆ ಕೇರಳದಲ್ಲಿ ಆಗಬಾದ್ದು ಆಗಿಹೋಗಿತ್ತು. ಭಾನುವಾರ, ಎರ್ನಾಕುಳಂ ಜಿಲ್ಲೆಯ ಕಳಮಶ್ಶೇರಿಯಲ್ಲಿ ಕಳಮಶ್ಶೇರಿಯ, ಜಮ್ರಾ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್‌ನಲ್ಲಿ ಯಹೋವಾಸ್ ವಿಟ್ನೆಸ್ (Jehovah Witness)ಕ್ರೈಸ್ತ ಪಂಗಡದ ಮೂರು ದಿನಗಳ ಪ್ರಾರ್ಥನಾ(Prayer) ಸಭೆ ನಡೀತಿತ್ತು. ಸಭೆಯ ಕೊನೇ ದಿನ, ಅಂದ್ರೆ ಭಾನುವಾರ ಅದೇ ಸ್ಥಳದಲ್ಲಿ ಸರಣಿ ಸ್ಫೋಟ(Bomb blast) ಸಂಭವಿಸಿತು. ಕೆಲವೇ ನಿಮಿಷಗಳ ಅಂತರದಲ್ಲಿ, ಮೂರು ಬಾರಿ ಸಿಡಿದ ಬಾಂಬಿಗೆ, ಮೂವರು ಬಲಿಯಾದ್ರು. 50ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದ ಬರೀ ಕೇರಳ(Kerala) ಮಾತ್ರವೇ ಅಲ್ಲ, ಭಾರತವೇ ಆಘಾತಕ್ಕೊಳಗಾಗೋ ಹಾಗಿದೆ. ಇಡೀ ಭಾನುವಾರ ಎಲ್ಲಿ ನೋಡಿದ್ರೂ ಈ ಬ್ಲಾಸ್ಟಿನದ್ದೇ ಸುದ್ದಿ.. ಇಂಥಾ ಬಾಂಬ್ ದಾಳಿಯ ಹಿಂದೆ, ಯಾರಿದ್ದಾರೆ, ಬಾಂಬ್ ಇಟ್ಟಿದ್ದಾದ್ರೂ ಯಾರು..? ಯಾವ್ ಬಾಂಬ್ ಅದು? ಹೇಗೆ ತಯಾರಾಯ್ತು ಅನ್ನೋ ನೂರೆಂಟು ಪ್ರಶ್ನೆಗಳು ಕಾಡ್ತಾ ಇರ್ಬೇಕಾದ್ರೆ, ಮತ್ತೊಂದು ಘಟನೆ ನಡೆದಿತ್ತು.. ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಆ ಬ್ಲಾಸ್ಟ್ ಮಾಡಿದ್ದು ನಾನೇ, ನಾನೇ ಆ ಸ್ಫೋಟಕ್ಕೆ ಕಾರಣ ಅಂತ ಹೇಳ್ಕೊಳ್ತಾಇದಾರೆ ಈ ವ್ಯಕ್ತಿ. ಅದಕ್ಕೆ ಈತ ಕೊಟ್ಟಿರೋ ಕಾರಣಗಳು ನಿಜಕ್ಕೂ ಭಯ ಉಂಟುಮಾಡ್ತಾವೆ. 

ಇದನ್ನೂ ವೀಕ್ಷಿಸಿ:  "ಡಿಕೆಶಿ ಕಾರಣಕ್ಕೇ ಸರ್ಕಾರ ಪತನ" ಸಾಹುಕಾರನ ಹೊಸ ಬಾಂಬ್: ಕರ್ನಾಟಕದಲ್ಲಿ ನಡೆಯಲಿದ್ಯಂತೆ "ಅಜಿತ್ ಪವಾರ್" ಆಟ..!