ಪಾಕಿಸ್ತಾನದಲ್ಲಿ ಉಗ್ರರ ಹತ್ಯೆ ಹಿಂದೆ ಭಾರತದ RAW ಕೈವಾಡ, ಬ್ರಿಟನ್ ವರದಿ ತಂದ ಸಂಚಲನ!
ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಹತ್ಯೆಹಿಂದೆ ಭಾರತದ ಕೈವಾಡ, ಬ್ರಿಟನ್ ವರದಿ, 25 ಗ್ಯಾರೆಂಟಿ ಪ್ರಣಾಳಿಕೆ ಬಿಡುಗಡೆ ಮಾಡಿ ಕಾಂಗ್ರೆಸ್,ಮೋದಿ ಆಫೀಮು ಕುಡಿದು ಮಲಗಿದ್ದರು, ಖರ್ಗೆ ಹೇಳಿಕೆ ವಿವಾದ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರು ಪಾಕಿಸ್ತಾನದಲ್ಲಿ ಅಪರಿಚಿತರ ದಾಳಿಗೆ ಬಲಿಯಾದ ಹಲವು ಘಟನೆಗಳು ನಡೆದಿದೆ. 2020ರ ಬಳಿಕ ಹಲವು ಉಗ್ರರು ನಡು ಬೀದಿಯಲ್ಲಿ ಹೆಣವಾಗಿದ್ದಾರೆ. ಅಪರಿಚಿತರ ದಾಳಿಗೆ ಉಗ್ರರು ಸತತವಾಗಿ ಹತ್ಯೆಯಾಗಿದ್ದಾರೆ. ಆದರೆ ಈ ಹತ್ಯೆ ಕುರಿತು ಅಧ್ಯಯನ ವರದಿಯನ್ನು ಬ್ರಿಟನ್‌ನ ದಿ ಗಾರ್ಡಿಯನ್ ಪತ್ರಿಕೆ ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ, ಪಾಕಿಸ್ತಾನದಲ್ಲಿ ಅಪರಿಚಿತರ ಗುಂಡಿಗೆ ಉಗ್ರರ ಹತ್ಯೆಯಲ್ಲಿ ಭಾರತದ RAW ಎಜೆನ್ಸಿ ಕೈವಾಡವಿದೆ ಎಂದು ವರದಿ ಮಾಡಿದೆ. ಈ ವರದಿಯನ್ನು ಭಾರತ ಅಲ್ಲಗೆಳೆದಿದೆ.