ಸಂವಿಧಾನದಲ್ಲಿ ಏನಂತ ಬರೆದಿದೆ..ಅಂಬೇಡ್ಕರ್ ಹೇಳಿದ್ದೇನು ? ಇಂಡಿಯಾ ಹೆಸರಿಗಿರುವ ಇತಿಹಾಸವೇನು..?

ವೇದ-ಪುರಾಣ-ಇತಿಹಾಸಗಳಲ್ಲಿ ಬೆಳಗುತ್ತಿದೆ ‘ಭಾರತ’!
ದೇಶದ ಹೆಸರು ಬದಲಾಯಿಸೋಕೆ ಏನೇನ್ ಮಾಡ್ಬೇಕು ?
ಯಾವ್ಯಾವ ದೇಶಗಳು ಹೆಸರು ಬದಲಿಸಿಕೊಂಡಿವೆ..?

First Published Sep 7, 2023, 9:30 AM IST | Last Updated Sep 7, 2023, 9:30 AM IST

ಇಂಡಿಯಾ ಹೆಸರಿಗೆ ಬದಲಾಗಿ ಭಾರತ ಅನ್ನೋ ಹೆಸರು ಇಡೋಕೆ ಮೋದಿ ಸರ್ಕಾರ(Modi Government) ತೀರ್ಮಾನ ಮಾಡಿದೆ ಅನ್ನೋ ಮಾತಿದೆ. ಭಾರತ(India) ಅನ್ನೋ ಹೆಸರು ಈಗ ಎಲ್ಲೆಲ್ಲೂ ಸದ್ದು ಮಾಡ್ತಾ ಇದೆ. ಬಹುತೇಕ ಇಲ್ಲಿ ತನಕ ಇಂಡಿಯಾ ಬೇರೆ ಅಲ್ಲ, ಭಾರತ ಬೇರೆ ಅಲ್ಲ. ದೇಶ ಒಂದೇ ಆದ್ರೂ ಹೆಸರು ಬೇರೆ ಬೇರೆ ಅಂದ್ಕೊಂಡಿದ್ರು. ಆದ್ರೆ ಈ ವಿಚಾರದಲ್ಲೂ ಈಗ ವಿಪಕ್ಷಗಳ(opposition parties ) ಅಭಿಪ್ರಾಯ ಬೇರೆದಿದೆ. ಭಾರತಕ್ಕೆ ನಾನಾ ರೀತಿಯಲ್ಲಿ ಹೆಸರುಗಳಿದ್ದಾವೆ. ಈ ಪೈಕಿ, ಅಧಿಕೃತ ಹೆಸರುಗಳು ಅಂದ್ರೆ, ಭಾರತ ಮತ್ತು ಇಂಡಿಯಾ. ಹಲವಾರು ರಾಷ್ಟ್ರಗಳು ಭಾರತವನ್ನ ಹಿಂದೂಸ್ತಾನ್ ಅಂತಲೂ ಕರೀತಾವೆ. ಇಂಡಿಯಾ ಅನ್ನೋದು ಇಂಡಿಯಾದವರು ಇಟ್ಟ ಹೆಸರಲ್ಲ, ವಿದೇಶಿಗರು ಬಾಯಲ್ಲಿ ಪದೇ ಪದೇ ಬದಲಾಗುತ್ತಾ ಬಂದ ಹೆಸರು. ಅಷ್ಟೇ ಅಲ್ಲ, ಈಸ್ಟ್ ಇಂಡಿಯಾ ಕಂಪನಿ ಅನ್ನೋ ಹೆಸರಲ್ಲಿಯೇ ಬ್ರಿಟೀಷರು ಭಾರತವನ್ನ ಶತಮಾನಗಳ ಕಾಲ ಆಳಿದ್ರು. ಕಡೆಗೆ ದೇಶ ಬಿಟ್ಟು ಹೋಗುವಾಗ್ಲೂ ಅದೇ ಹೆಸರನ್ನೇ ಇಟ್ಟು ಹೋದ್ರು..ಹಾಗಾಗಿನೇ, ಯಾರೋ ಇಟ್ಟ ಹೆಸರು, ಯಾರೋ ಬಿಟ್ಟು ಹೋದ ಹೆಸರಿನ ಬದ್ಲು, ಭಾರತ ಅನ್ನೋ ಹೆಸರೇ ನಮಗಿರ್ಲಿ ಅನ್ನೋದು, ಬಹುಜನಗಳ ವಾದ, ಅಭಿಪ್ರಾಯವಾಗಿದೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಕೃಷ್ಣ ಜಯಂತಿ ಇದ್ದು, ಈ ರಾಶಿಯವರಿಗೆ ಖರ್ಚು ಹೆಚ್ಚಾಗಲಿದೆ