Asianet Suvarna News Asianet Suvarna News

ಖುದ್ದು ಇನೋವಾ ಕಾರು ಡ್ರೈವ್ ಮಾಡಿ ಹತ್ರಾಸ್‌ಗೆ ಹೊರಟ ಪ್ರಿಯಾಂಕ ಗಾಂಧಿ!

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಹಾಗೂ ಪೊಲೀಸರು ನಡೆದುಕೊಂಡ ರೀತಿ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅತ್ಯಾಚಾರಕ್ಕೆ ಬಲಿಯಾದ 19 ವರ್ಷದ ಬಾಲಕಿ ಪೋಷಕರ ಮನೆಗೆ ತೆರಳುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂದಿ ಮೊದಲ ಪ್ರಯತ್ನಕ್ಕೆ ಪೊಲೀಸರು ಅಡ್ಡಿಯಾಗಿದ್ದರು. ಇದೀಗ ಪ್ರಿಯಾಂಕಾ ಗಾಂಧಿ ಖುದ್ದು ಇನೋವಾ ಕಾರು ಡ್ರೈವ್ ಮಾಡುತ್ತಾ ಹತ್ರಾಸ್‌ಗೆ ತೆರಳಿದ್ದಾರೆ. ಪ್ರಿಯಾಂಕಾ‌ಗೆ ರಾಹುಲ್ ಸಾಥ್ ನೀಡಿದ್ದಾರೆ.