ದೆಹಲಿಯಲ್ಲಿ ಹೆಚ್ಚಾಗ್ತಿದೆ ಕೋವಿಡ್ ಸೋಂಕು; 2 ನೇ ಅಲೆ ಶುರು?
ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾದಂತೆ ಕೊರೊನಾ ಸೋಂಕು, ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಕೋವಿಡ್ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಒಂದೇ ದಿನ 5 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ.
ಬೆಂಗಳೂರು (ಅ 29): ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾದಂತೆ ಕೊರೊನಾ ಸೋಂಕು, ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಕೋವಿಡ್ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಒಂದೇ ದಿನ 5 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಮತ್ತೊಂದೆಡೆ ಸೋಮವಾರ ಒಂದೇ ದಿನ 54 ಮಂದಿ ಸಾವಿಗೀಡಾಗಿದ್ದಾರೆ. ಈ ಅಂಕಿ ಅಂಶ ಆಘಾತಕಾರಿಯಾಗಿದ್ದು ಕೋವಿಡ್ 2 ನೇ ಅಲೆ ಶುರುವಾಗಿದ್ಯಾ? ಎಂಬ ಆತಂಕವನ್ನು ಹುಟ್ಟು ಹಾಕಿದೆ.