Asianet Suvarna News Asianet Suvarna News

Russia- Ukraine Crisis: 'ನಮ್ಮ ಹಾಸ್ಟೆಲ್ ಎದುರು ಭಾರತದ ಧ್ವಜ ಇರುವ ಬಸ್ ನೋಡಿ ಖುಷಿ ಆಯ್ತು'

ಉಕ್ರೇನ್‌ನಲ್ಲಿ ಸಿಲುಕಿರುವವರ ರಕ್ಷಣೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ಅಪರೇಷನ್‌ ಗಂಗಾ ಏರ್‌ಲಿಫ್ಟ್‌ನಲ್ಲಿ ಕರ್ನಾಟಕ ಮೂಲದ 31 ವಿದ್ಯಾರ್ಥಿಗಳು ತವರಿಗೆ ಮರಳಿದ್ದಾರೆ.
 

First Published Feb 28, 2022, 10:31 AM IST | Last Updated Feb 28, 2022, 10:31 AM IST

ಬೆಂಗಳೂರು (ಫೆ. 28): ಉಕ್ರೇನ್‌ನಲ್ಲಿ ಸಿಲುಕಿರುವವರ ರಕ್ಷಣೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ಅಪರೇಷನ್‌ ಗಂಗಾ ಏರ್‌ಲಿಫ್ಟ್‌ನಲ್ಲಿ ಕರ್ನಾಟಕ ಮೂಲದ 31 ವಿದ್ಯಾರ್ಥಿಗಳು ತವರಿಗೆ ಮರಳಿದ್ದಾರೆ.

Russia- Ukraine Crisis: ಶೀಘ್ರವೇ ಇನ್ನೂ 13000 ಭಾರತೀಯರ ರಕ್ಷಣೆ: ಕೇಂದ್ರ

ಸ್ವದೇಶಕ್ಕೆ ಬಂದ ದೀಪಿಕಾ ಎಂಬುವವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದಿದ್ದಾರೆ. 'ನಾವು ಸುರಕ್ಷಿತವಾದ ಸ್ಥಳದಲ್ಲಿದ್ದೆವು. ಯುದ್ಧ ಆಗುತ್ತದೆ ಎಂದು ಮೊದಲೇ ತಿಳಿದಿತ್ತು, ನಾವು ಅಗತ್ಯ ವಸ್ತುಗಳನ್ನು ಮೊದಲೇ ತಂದಿಟ್ಟುಕೊಂಡಿದ್ದೆವು. ಬಾಂಬ್ ಸ್ಫೋಟವಾದ ದಿನ ನಮ್ಮ ಹಾಸ್ಟೆಲ್ ಎದುರು ಭಾರತೀಯ ಧ್ವಜ ಇರುವ ಬಸ್‌ಗಳು ಬಂದು ನಿಂತಿದ್ದವು. ಅದನ್ನು ನೋಡಿದಾಗ ಬಹಳ ಖುಷಿಯಾಯ್ತು. ಎಂಥಹ ಸಂದರ್ಭದಲ್ಲೂ ನಮ್ಮ ಸರ್ಕಾರ ನಮ್ಮ ಜೊತೆಗೆ ನಿಂತಿದೆ ಎಂದು ಮನ ತುಂಬಿ ಬಂತು' ಎಂದು ದೀಪಿಕಾ ಹೇಳಿದರು.