ವಿಧಾನಸಭೆಯಲ್ಲಿ ಹೈಡ್ರಾಮಾ, ಬಿಜೆಪಿ ಶಾಸಕನನ್ನು ಹೊರಹಾಕಿದ ಮಾರ್ಷಲ್ಸ್
ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರು ವಿರೋಧ ಪಕ್ಷದ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರಿಗೆ ಯಾವುದೇ ಹೇಳಿಕೆ ನೀಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದಾಗ ಇಡೀ ಸದನದಲ್ಲಿ ಕೋಲಾಹಲ ಆರಂಭವಾಯಿತು.
ಪಾಟ್ನಾ (ಜು.13):ಗುರುವಾರ ಬಿಹಾರ ವಿಧಾನಸಭೆಯಿಂದ ಬಿಜೆಪಿಯ ಒಂದೆರಡು ಶಾಸಕರನ್ನು ಮಾರ್ಷಲ್‌ಗಳು ಎತ್ತಿ ಹೊರಹಾಕಿದ್ದಾರೆ. ಸದನದ ಬಾವಿಯೊಳಗೆ ಪೋಸ್ಟರ್‌ಗಳು ಹಾಗೂ ಪ್ಲಕಾರ್ಡ್‌ಗಳನ್ನು ಅವರು ಬೀಸುತ್ತಾ ನಿಂತಿದ್ದರು ಇದನ್ನೂ ಕೂಡ ಮಾರ್ಷಲ್‌ಗಳು ಕಸಿದುಕೊಂಡಿದ್ದಾರೆ.
ಬೆಳಗ್ಗೆ 11 ಗಂಟೆಗೆ ಸಭಾಪರಿ ಅವಧ್ ಬಿಹಾರಿ ಚೌಧರಿ ಕಲಾಪ ಆರಂಭಿಸಿದ ಬೆನ್ನಲ್ಲಿಯೇ ಕೋಲಾಹಲ ಆರಂಭವಾಯಿತು. ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಶಾಸಕರನ್ನು ಮರಳಿ ಅವರ ಸ್ಥಾನಕ್ಕೆ ಕೂರಿಸುವವರೆಗೆ ಯಾವುದೇ ರೀತಿಯಲ್ಲೂ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪೀಕರ್ ಪ್ರತಿಪಕ್ಷದ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರಿಗೆ ಹೇಳಿದಾಗ ಇಡೀ ಸದನದಲ್ಲಿ ವಾಗ್ವಾದ ಆರಂಭವಾಯಿತು.
ಚಾರಿಟಿಗೆ ಹಣ ನೀಡಿದ್ರೆ ಅಭಿಮಾನಿಗಳಿಗೆ ನನ್ನ ಬೆತ್ತಲೆ ಚಿತ್ರವೇ ಗಿಫ್ಟ್: ನೀಲಿ ತಾರೆಯ ಆಫರ್!
ಅಸಮರ್ಥ ಮುಖ್ಯಮಂತ್ರಿ ತಮ್ಮ ಸ್ಥಾನವನ್ನು ತ್ಯಜಿಸಬೇಕು ಸೇರಿದಂತೆ ಇನ್ನೂ ಕೆಲವು ಘೋಷಣೆಗಳು ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ಕೂಗಿದರು. ಇದರಿಂದ ಇಡೀ ದಿನ ಕಲಾಪ ಗದ್ದಲದಲ್ಲಿಯೇ ಮುಳುಗಿ ಹೋಗಿತ್ತು.