Asianet Suvarna News Asianet Suvarna News

Assembly Elections 2022: ಉತ್ತರಪ್ರದೇಶದಲ್ಲಿ ಮುಸ್ಲಿಂ ಮಹಿಳಾಸ್ತ್ರ ಹೂಡಿದ್ರಾ ಪ್ರಧಾನಿ ಮೋದಿ?

*ಪಂಚರಾಜ್ಯ ಚುನಾವಣೆಯತ್ತ ದೇಶದ ಚಿತ್ತ
*ಉ.ಪ್ರದೇಶದಲ್ಲಿ ಮೋದಿ  ಮುಸ್ಲಿಂ ಮಹಿಳಾಸ್ತ್ರ?
*ನಾವು ಮುಸ್ಲಿಂ ಹೆಣ್ಣುಮಕ್ಕಳ ಪರ ಎಂದ ಪ್ರಧಾನಿ 

First Published Feb 13, 2022, 11:03 AM IST | Last Updated Feb 13, 2022, 11:03 AM IST

ಉತ್ತರಪ್ರದೇಶ (ಫೆ. 13): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ (UP Elections 2022) ಮೊದಲ ಹಂತದ ಮತದಾನದ ಭರ್ಜರಿಯಾಗಿದೆ.  ಪಂಚರಾಜ್ಯ ಚುನಾವಣೆಯ ಭಾಗವಾಗಿ ಸೋಮವಾರ ಮೂರು ರಾಜ್ಯಗಳಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ 2ನೇ ಹಂತದ ಮತದಾನ ನಡೆಯಲಿದ್ದರೆ, ಗೋವಾ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ರಾಷ್ಟ್ರ ರಾಜಕಾರಣದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯವಿರುವ ಉತ್ತರ ಪ್ರಧೇಶದಲ್ಲಿ ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆ ಏರಲು ತದಿಗಾಲಲ್ಲಿ ನಿಂತಿವೆ. 

ಇದನ್ನೂ ಓದಿ: ಓವೈಸಿ ಪಡೆಯುವ ಒಂದೊಂದು ಮತವೂ ಅಖಿಲೇಶ್‌ ಪಾಲಿಗೆ ನಷ್ಟವಾಗುತ್ತಾ?

ದೇವಭೂಮಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಗೆಲುವಿಗೆ ಡೊದ್ದ ಅಸ್ತ್ರವಾಗಿರುವುದು ಹಿಂದುತ್ವ ಅಜೆಂಡಾ ಆದರೆ ಉತ್ತರ ಪ್ರದೇಶ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಪ್ರಧಾನಿ ಮೋದಿ ಇದ್ದಕ್ಕಿದ್ದಂತೆ ಮುಸ್ಲಿಂ ಮಹಿಳಾ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳ (Muslim Women) ಧ್ವನಿ ಎತ್ತಿದ್ದಾರೆ. ಮೋದಿ ಬತ್ತಳಿಕೆಯಿಂದ ಸಿಡಿದಿರೋ ಮುಸ್ಲಿಂ ಮಹಿಳಾಸ್ತ್ರದ ಗುಟ್ಟೇನು? ಹಿಂದೂ ಹೃದಯ ಸಾಮ್ರಾಟನ ಈ ರೋಚಕ ಅಸ್ತ್ರದ ಹಿಂದಿರುವ ರಹಸ್ಯವೇನು ಗೊತ್ತಾ? ಇಲ್ಲಿದೆ ಈ ಕುರಿತ ವರದಿ!