Asianet Suvarna News Asianet Suvarna News

ದಿಶಾ ಅತ್ಯಾಚಾರ ಪ್ರಕರಣ: ಎನ್‌ಕೌಂಟರ್ ನಕಲಿ, ಹೀರೋಗಳೇ ವಿಲನ್..?

2019ರ ಹೈದರಾಬಾದ್‌ ಪಶುವೈದ್ಯೆ ಅತ್ಯಾಚಾರ/ಕೊಲೆ (Disha Rape Case) ಪ್ರಕರಣದ ನಾಲ್ವರು ಆರೋಪಿಗಳನ್ನು ಹತ್ಯೆ ಮಾಡಲಾದ ಪ್ರಕರಣವನ್ನು ‘ನಕಲಿ ಎನ್‌ಕೌಂಟರ್‌’ (Fake Encounter) ಎಂದು ಸುಪ್ರೀಂ ಕೋರ್ಟ್‌ನಿಂದ (Supreme Court) ತನಿಖೆಗೆ ರಚನೆಯಾಗಿದ್ದ ನ್ಯಾ ಸಿರ್‌ಪುರ್‌ಕರ್‌ ಆಯೋಗ ಹೇಳಿದೆ.

2019 ರ ಹೈದರಾಬಾದ್‌ ಪಶುವೈದ್ಯೆ ಅತ್ಯಾಚಾರ/ಕೊಲೆ (Disha Rape Case) ಪ್ರಕರಣದ ನಾಲ್ವರು ಆರೋಪಿಗಳನ್ನು ಹತ್ಯೆ ಮಾಡಲಾದ ಪ್ರಕರಣವನ್ನು ‘ನಕಲಿ ಎನ್‌ಕೌಂಟರ್‌’ (Fake Encounter) ಎಂದು ಸುಪ್ರೀಂ ಕೋರ್ಟ್‌ನಿಂದ (Supreme Court) ತನಿಖೆಗೆ ರಚನೆಯಾಗಿದ್ದ ನ್ಯಾ ಸಿರ್‌ಪುರ್‌ಕರ್‌ ಆಯೋಗ ಹೇಳಿದೆ. ಎನ್‌ಕೌಂಟರ್‌ ನಡೆಸಿದ್ದ 10 ಪೊಲೀಸರ ಮೇಲೆ ಕೊಲೆ ಪ್ರಕರಣ ದಾಖಲಿಸಲು ಶಿಫಾರಸು ಮಾಡಿದೆ. ಇದರೊಂದಿಗೆ ಆರೋಪಿಗಳನ್ನು ಹತ್ಯೆ ಮಾಡಿದ್ದ ತೆಲಂಗಾಣ ಪೊಲೀಸರಿಗೆ ಭಾರೀ ಹಿನ್ನಡೆಯಾಗಿದೆ. 

2019ರ ನ.27ರಂದು 27ರ ಹರೆಯದ ಪಶುವೈದ್ಯೆಯೊಬ್ಬಳನ್ನು ನಾಲ್ವರು ದುರುಳರು ಹೈದರಾಬಾದ್‌ನ ಸೈಬರಾಬಾದ್‌ ಸಮೀಪ ಅತ್ಯಾಚಾರ ಮಾಡಿದ್ದರು ಹಾಗೂ ಆಕೆಯನ್ನು ಹತ್ಯೆ ಮಾಡಿ ಶವವನ್ನು ಸುಟ್ಟು ಹಾಕಿದ್ದರು. ಇದು ‘ದಿಶಾ ಅತ್ಯಾಚಾರ ಪ್ರಕರಣ’ ಎಂದು ಬಳಿಕ ನಡೆದ ತನಿಖೆಯಲ್ಲಿ ಮೊಹಮ್ಮದ್‌ ಆರಿಫ್‌, ಚಿಂತಕುಂಟ್ಲ ಚೆನ್ನಕೇಶವುಲು, ಜೊಲ್ಲು ಶಿವ ಹಾಗೂ ಜೊಲ್ಲು ನವೀನ್‌ ಎಂಬುವರನ್ನು ಬಂಧಿಸಿದ್ದರು. ಘಟನೆಯ ಮಹಜರಿಗಾಗಿ ಘಟನಾ ಸ್ಥಳಕ್ಕೆ ಈ ನಾಲ್ವರನ್ನೂ ಪೊಲೀಸರು ಕರೆದೊಯ್ದಿದ್ದರು. ಆದರೆ, ‘ಆರೋಪಿಗಳು ನಮ್ಮ ಮೇಲೆ ದಾಳಿ ನಡೆಸಲು ಯತ್ನಿಸಿ ಪರಾರಿಗೆ ಮುಂದಾಗಿದ್ದರು’ ಎಂದಿದ್ದ ಪೊಲೀಸರು, 2019ರ ಡಿ.6ರಂದು ಈ ನಾಲ್ವರನ್ನೂ ಎನ್‌ಕೌಂಟರ್‌ನಲ್ಲಿ ಸಾಯಿಸಿದ್ದರು.

ಕರ್ನಾಟಕದ ಹುಬ್ಬಳ್ಳಿ ಮೂಲದ ಐಪಿಎಸ್‌ ಅಧಿಕಾರಿ, ಅಂದಿನ ಸೈಬರಾಬಾದ್‌ ಪೊಲೀಸ್‌ ಕಮಿಶ್ನರ್‌ ವಿ.ಸಿ. ಸಜ್ಜನರ್‌ ಮೇಲುಸ್ತುವಾರಿಯಲ್ಲಿ ಈ ಎನ್‌ಕೌಂಟರ್‌ ನಡೆದಿತ್ತು. ಆದರೆ ಈಗ ಕೊಲೆ ಎಫ್‌ಐಆರ್‌ ದಾಖಲಿಸಲು ಸುಪ್ರೀಂ ಕೋರ್ಟ್ ಸೂಚಿಸಿದ 10 ಪೊಲೀಸರ ಪಟ್ಟಿಯಲ್ಲಿ ಸಜ್ಜನರ್‌ ಹೆಸರಿಲ್ಲ. ಎನ್‌ಕೌಂಟರ್‌ ಸ್ಥಳದಲ್ಲಿ ಖುದ್ದು ಹಾಜರಿದ್ದ 10 ಪೊಲೀಸರ ಮೇಲೆ ಪ್ರಕರಣ ದಾಖಲಾಗಲಿದೆ ಎನ್ನಲಾಗಿದೆ.

Video Top Stories