Asianet Suvarna News Asianet Suvarna News

ಛಲ ಅಂದ್ರೆ ಇದು, ಒಂಟಿ ಕಾಲಿನಲ್ಲೇ 1 ಕಿ.ಮೀ ನಡೆದು ಶಾಲೆಗೆ ಹೋಗ್ತಾಳೆ ಈ ಬಾಲಕಿ!

ಕೈ ಕಾಲು ಚೆನ್ನಾಗಿದ್ರೂ ಅಸಡ್ಡೆಯಿಂದ ಏನನ್ನೂ ಸಾಧನೆ ಮಾಡದವರು ಬಹಳಷ್ಟಿದ್ದಾರೆ. ಆದರೆ ವಿಶೇಷ ಚೇತನರು ತಮ್ಮ ನ್ಯೂನತೆಯನ್ನು ಸವಾಲಾಗಿ ತೆಗೆದುಕೊಂಡು, ಸಾಧಿಸಿ ತೋರಿಸ್ತಾರೆ. ಬಿಹಾರದ ಜಮ್ಮಯ್ಯಾ ಕೈರಾ ಬ್ಲಾಕ್‌ನ ಫತೇಫುರ್ ಗ್ರಾಮದ ಮಹಾದಲಿತ ಕುಟುಂಬದ 10 ವರ್ಷದ ಹುಡುಗಿ ಸೀಮಾಗೆ ಓದುವ ಮತ್ತು ಬರೆಯುವ ಉತ್ಸಾಹ. ಚೆನ್ನಾಗಿ ಓದಿ ಶಿಕ್ಷಕಿಯಾಗಬೇಕೆಂಬ ಆಸೆಯಿದೆ. 

ಕೈ ಕಾಲು ಚೆನ್ನಾಗಿದ್ರೂ ಅಸಡ್ಡೆಯಿಂದ ಏನನ್ನೂ ಸಾಧನೆ ಮಾಡದವರು ಬಹಳಷ್ಟಿದ್ದಾರೆ. ಆದರೆ ವಿಶೇಷ ಚೇತನರು ತಮ್ಮ ನ್ಯೂನತೆಯನ್ನು ಸವಾಲಾಗಿ ತೆಗೆದುಕೊಂಡು, ಸಾಧಿಸಿ ತೋರಿಸ್ತಾರೆ. ಬಿಹಾರದ ಜಮ್ಮಯ್ಯಾ ಕೈರಾ ಬ್ಲಾಕ್‌ನ ಫತೇಫುರ್ ಗ್ರಾಮದ ಮಹಾದಲಿತ ಕುಟುಂಬದ 10 ವರ್ಷದ ಹುಡುಗಿ ಸೀಮಾಗೆ ಓದುವ ಮತ್ತು ಬರೆಯುವ ಉತ್ಸಾಹ. ಚೆನ್ನಾಗಿ ಓದಿ ಶಿಕ್ಷಕಿಯಾಗಬೇಕೆಂಬ ಆಸೆಯಿದೆ. ಒಂದು ಕಾಲಿನ ಅಂಗವೈಕಲ್ಯವಿದ್ದರೂ, ಒಂದೇ ಕಾಲಿನಲ್ಲಿ 1 ಕಿಮೀ ನಡೆದು ಶಾಲೆಗೆ ಹೋಗಿ ಕಲಿಯುತ್ತಿದ್ದಾಳೆ. 2 ವರ್ಷದ ಹಿಂದೆ ಅಪಘಾತದ ನಂತರ, ಈಕೆಯ ಜೀವ ಉಳಿಸಲು ಒಂದು ಕಾಲನ್ನು ಕತ್ತರಿಸಲಾಯಿತು. ಯಾರಿಗೂ ಹೊರೆಯಾಗಬರದೆಂದು ಈಕೆ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುತ್ತಾಳೆ.