Asianet Suvarna News Asianet Suvarna News
breaking news image

ಮಾಕಾರಹಳ್ಳಿಯಲ್ಲಿ 25ನೇ ವರ್ಷದ ಶ್ರೀರಾಮಕೋಟಿ ಮಹೋತ್ಸವ

ಕೋಲಾರ ಜಿಲ್ಲೆಯ ಬಂಗಾರ ಪೇಟೆ ತಾಲೂಕಿನ ಮಾಕಾರ ಹಳ್ಳಿಯಲ್ಲಿ 25ನೇ ವರ್ಷದ ರಾಮಕೋಟಿ ಮಹೋತ್ಸವವು ನಾಲ್ಕು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು. 

ಕೋಲಾರ(Kolar) ಜಿಲ್ಲೆಯ ಬಂಗಾರ ಪೇಟೆ(Bangarpet) ತಾಲೂಕಿನ ಮಾಕಾರ ಹಳ್ಳಿಯಲ್ಲಿ ವಿಭಿನ್ನವಾಗಿ 25ನೇ ವರ್ಷದ ರಾಮಕೋಟಿ ಮಹೋತ್ಸವ ಆಚರಿಸಲಾಯಿತು. ಗುರುವಾರದಿಂದ ಭಾನುವಾರದವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಒಂದು ಕೋಟಿ ಬಾರಿ ರಾಮನಾಮ ಜಪ ನಡೆಸಲಾಯಿತು.

ಶರಣರ ಭಕ್ತಿ, ದೈವದ ಶಕ್ತಿ: ಕಲ್ಯಾಣ ಕರ್ನಾಟಕದ ಅಕ್ಷರ- ಅನ್ನ ದಾಸೋಹದ ಅಪ್ಪ ಶರಣಬಸಪ್ಪ

ವೃದ್ಧರು, ಮಹಿಳೆಯರು, ಮಕ್ಕಳೆನ್ನದೆ ಎಲ್ಲ ವಯೋಮಾನದವರೂ ಈ ಮಹೋತ್ಸವದಲ್ಲಿ ಭಾಗವಹಿಸಿ ಕೋಲಾಟವಾಡುತ್ತಾ ರಾಮ ನಾಮ ಜಪಿಸಿದರು. ಅಲ್ಲದೆ, ರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಸರ್ವರ ಒಳಿತಿಗೆ ಪ್ರಾರ್ಥಿಸಿದರು. ಈ ಮಹೋತ್ಸವದ ಒಂದು ಝಲಕ್ ಇಲ್ಲಿದೆ. 

Video Top Stories