ಶರಣರ ಭಕ್ತಿ, ದೈವದ ಶಕ್ತಿ: ಕಲ್ಯಾಣ ಕರ್ನಾಟಕದ ಅಕ್ಷರ- ಅನ್ನ ದಾಸೋಹದ ಅಪ್ಪ ಶರಣಬಸಪ್ಪ

ಕನ್ನಡ ನಾಡು ಶರಣರ ನೆಲೆವೀಡು. ಈ ಸಂಸ್ಥಾನ ಸ್ವಾತಂತ್ರ್ಯ ಸಂಗ್ರಾಮಕ್ಕೂ ಸೈ, ದಾಸೋಹಕ್ಕೂ ಸೈ. ಕಲ್ಯಾಣ ಕರ್ನಾಟಕದ ಅಕ್ಷರ- ಅನ್ನ ದಾಸೋಹದ ಅಪ್ಪ ಶರಣಬಸಪ್ಪನವರ ಕುರಿತ ವಿಶೇಷ ವಿಡಿಯೋ ಇಲ್ಲಿದೆ. 

First Published May 23, 2022, 12:23 PM IST | Last Updated May 23, 2022, 12:23 PM IST

ಕನ್ನಡ ನಾಡು ಸಾಕಷ್ಟು ಶರಣರನ್ನು ಕಂಡು ಪಾವನವಾಗಿದೆ. ಅವರ ಕಾಯಕ, ಚಿಂತನೆಗಳ ಶ್ರೀಮಂತಿಕೆಗೆ ತಲೆ ಬಾಗಿದೆ. ಅಂಥ ಮಹಾನ್ ಶರಣರಲ್ಲೊಬ್ಬರು ಕಲ್ಯಾಣ ಕರ್ನಾಟಕದ ಅಕ್ಷರ- ಅನ್ನ ದಾಸೋಹದ ಅಪ್ಪ ಶರಣಬಸಪ್ಪ. ಕಲಬುರಗಿಯ ಶ್ರೀ ಶರಣ ಬಸವೇಶ್ವರರ ಕ್ಷೇತ್ರ ರಾಜ್ಯದಲ್ಲಿಯೇ ಪ್ರಸಿದ್ಧ ಕ್ಷೇತ್ರಗಳಲ್ಲೊಂದು. 

ಬಾಗಲಕೋಟೆಯಲ್ಲಿ ಗ್ರಾಮ ದೇವತೆಯರ ಜಾತ್ರೆ: ಕೊರೋನಾ ಇಲ್ಲದೆ ಈ ಬಾರಿ ಅದ್ಧೂರಿ ಜಾತ್ರೆ

ಸಾಮಾನ್ಯರಂತೆ ಜನಿಸಿ, ಸಾಮಾನ್ಯರಂತೆಯೇ ಬೆಳೆದು ಅಸಾಮಾನ್ಯ ವ್ಯಕ್ತಿತ್ವದಿಂದ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆದವರು ಶ್ರೀ ಶರಣ ಬಸವೇಶ್ವರರು. ಬಸವಣ್ಣನವರ ತತ್ವಗಳನ್ನು ಸಾರುತ್ತಾ ತ್ರಿವಿಧ ದಾಸೋಹದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಹೀಗಾಗಿ, ಕಲಬುರಗಿಯಲ್ಲಿ ಶರಣಬಸವೇಶ್ವರರಿಗೆ ದೇವಾಲಯವನ್ನೇ ನಿರ್ಮಿಸಲಾಗಿದೆ. ಕಲಬುರಗಿ ಶರಣ ಬಸವೇಶ್ವರರ ಇತಿಹಾಸ, ಭಕ್ತ ಪರಂಪರೆಗೆ ಅವರು ನೀಡಿದ ಕೊಡುಗೆ, ಬಸವೇಶ್ವರರ ವ್ಯಕ್ತಿತ್ವ ಪರಿಚಯದ ವಿವರಗಳನ್ನು ನೋಡೋಣ ಬನ್ನಿ.