Asianet Suvarna News Asianet Suvarna News

ಹೇಗಿತ್ತು ರಾಜರ ಕಾಲದ ಮೈಸೂರು ದಸರಾ?: ಸುವರ್ಣ ನ್ಯೂಸ್ ಜೊತೆ ರಾಜವಂಶಸ್ಥರ ಮಾತು!

ಅಂದಿನ ದಸರಾಕ್ಕೂ ಇಂದಿನ ದಸರಾಕ್ಕೂ ಏನು ಭಿನ್ನತೆಯೇನು? ಹೇಗಿತ್ತು ರಾಜರ ಕಾಲದ ಮೈಸೂರು ದಸರಾ ಎಂಬೆಲ್ಲಾ ಮಾಹಿತಿಯನ್ನು ಸುವರ್ಣ ನ್ಯೂಸ್ ಜೊತೆ ರಾಜವಂಶಸ್ಥರ ರಾಜಪುತ್ರಿಯರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಪ್ರತಿ ವರ್ಷವೂ ದಸರಾಕ್ಕೆ ಕಾಯುವುದು ಮಾಮೂಲಿ. ಸಡಗರ ಸಂಭ್ರಮದಿಂದಲೇ ಆರಂಭವಾಗುವ ದಸರಾ ಜಂಬೂ ಸವಾರಿಯೊಂದಿಗೆ ಮುಗಿದು ಹೋಗುತ್ತದೆ. ಇಷ್ಟು ವರ್ಷಗಳಲ್ಲಿ ನಡೆದ ದಸರಾಕ್ಕೆ ಹೋಲಿಸಿದರೆ ಈ ಬಾರಿಯ ದಸರಾವನ್ನು ಜನ ಸ್ವಾಗತಿಸಿದ ರೀತಿ ವಿಶೇಷವಾಗಿದೆ. ಏಕೆಂದರೆ ಎರಡು ವರ್ಷಗಳ ಕಾಲ ಕಾಡಿದ ಕೊರೋನಾ ದಸರಾ ಸಂಭ್ರಮವನ್ನು ನುಂಗಿ ಹಾಕಿತ್ತು. ಹೀಗಾಗಿ ಈ ಬಾರಿಯ ದಸರಾದಲ್ಲಿ ಜನ ಮೈಕೊಡವಿಕೊಂಡು ಮನೆಯಿಂದ ಹೊರ ಬಂದಿದ್ದರ ಪರಿಣಾಮ ಎಲ್ಲೆಂದರಲ್ಲಿ ಜನವೋ ಜನ. ಮಾತ್ರವಲ್ಲದೇ ದಸರಾ ಜಂಬೂ ಸವಾರಿಗೆ ಇನ್ನೇನು ಕ್ಷಣಗಣನೆ ಶುರುವಾಗಿದ್ದು, ಈ ಹಿಂದೆ ರಾಜರ ಕಾಲದಲ್ಲಿ ದಸರಾವನ್ನು ಯಾವ ರೀತಿ ಆಚರಿಸುತ್ತಿದ್ದರು. ಇವೆಲ್ಲವನ್ನು ನಮ್ಮ ಸ್ಟುಡಿಯೋದಲ್ಲಿ ರಾಜವಂಶಸ್ಥರು ಮೆಲುಕು ಹಾಕಿದ್ದಾರೆ. ಹೌದು! ರಾಜರ ಕಾಲದ ಸಂಪ್ರದಾಯಗಳು ಹೇಗಿದ್ದವು, ಮೈಸೂರು ಅರಮನೆಯ ಸೊಬಗಿನ ದಸರಾ ಹಿನ್ನಲೆ, ಅಂದಿನ ದಸರಾಕ್ಕೂ ಇಂದಿನ ದಸರಾಕ್ಕೂ ಏನು ಭಿನ್ನತೆಯೇನು? ಹೇಗಿತ್ತು ರಾಜರ ಕಾಲದ ಮೈಸೂರು ದಸರಾ ಎಂಬೆಲ್ಲಾ ಮಾಹಿತಿಯನ್ನು ಸುವರ್ಣ ನ್ಯೂಸ್ ಜೊತೆ ರಾಜವಂಶಸ್ಥರ ರಾಜಪುತ್ರಿಯರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.