ನಂಜನಗೂಡಲ್ಲೂ ಇದ್ದಾಳೆ ಬೃಹತ್ ಚಾಮುಂಡೇಶ್ವರಿ
ನಂಜನಗೂಡಿನಲ್ಲೊಬ್ಬಳು ಚಾಮುಂಡೇಶ್ವರಿಯಿದ್ದಾಳೆ. ಪೀಠವೂ ಸೇರಿ ಸುಮಾರು 15 ಅಡಿ ಎತ್ತರವಾಗಿ ಕಂಗೊಳಿಸುವ ಈಕೆಯನ್ನು ಇಲ್ಲಿ ಪ್ರತಿಷ್ಠಾಪಿಸಿದವರಾರು?
ಕಪಿಲ ಮಹಾಮುನಿಗಳು ನಂಜನಗೂಡಿನ ಕಪಿಲಾ ನದಿಯ ಹತ್ತಿರ ಚಾಮುಂಡಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ್ದರು. ಈ ವಿಗ್ರಹ ಚಿಕ್ಕದಾಗಿತ್ತು. ನಂತರ ಜಯಚಾಮರಾಜೇಂದ್ರ ಒಡೆಯರ್ ಅದೇ ಸ್ಥಳದಲ್ಲಿ ಸುಮಾರು 10 ಅಡಿಯ ಬೃಹತ್ ಚಾಮುಂಡೇಶ್ವರಿ ವಿಗ್ರಹವನ್ನು ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಇದು ಈಗಲೂ ನಂಜನಗೂಡಿನ ಕಪಿಲಾ ನದಿಯ ಬಳಿ ಇದೆ. ನಂಜನಗೂಡಿಗೆ ಹೋದಾಗ ಈಕೆಯ ದರ್ಶನವನ್ನೂ ಮಾಡಿ ಎನ್ನುತ್ತಾರೆ ಬ್ರಹ್ಮಾಂಡ ಗುರುಗಳು.