ಇಲ್ಲಿ ಮುಸ್ಲಿಂ ಕುಟುಂಬಕ್ಕೆ ಆಹ್ವಾನ ಕೊಟ್ಟ ಮೇಲೇ ನಡೆಯೋದು ಹನುಮಂತ ಜಾತ್ರೆ
ಭಟ್ಕಳದ ಹನುಮಂತ ಜಾತ್ರೆಗೆ ಮುಸ್ಲಿಂ ಕುಟುಂಬಕ್ಕೆ ಆಹ್ವಾನ ನೀಡಿದ ನಂತರವೇ ಉತ್ಸವ ಆರಂಭವಾಗುತ್ತದೆ. ಕೋಮು ಸೌಹಾರ್ದತೆ ಸಾರುವ ಈ ಜಾತ್ರೆಯ ವೈಶಿಷ್ಠ್ಯತೆ ಏನು?
ಭಟ್ಕಳ(Bhatkal)ದಲ್ಲಿ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಜಾತ್ರೋತ್ಸವ ಎಂದರೆ ಮೊದಲು ಮಹಮದ್ ಅನ್ಸಾರಿ ಶಾಬಂದ್ರಿ ಚರ್ಕಿನ್ ಅವರ ಕುಟುಂಬಕ್ಕೆ ಆಹ್ವಾನ ಹೋಗುತ್ತದೆ. ಅವರಿಗೆ ವೀಳ್ಯದೆಲೆ ಹಾರ ಹಾಕಿ ಜಾತ್ರೆಗೆ ಕರೆಯಲಾಗುತ್ತದೆ. ಶಾಬಂದ್ರಿ ಅವರ ಕುಟುಂಬವೂ ಅಷ್ಟೇ, ಹಿಂದೂ ಬಾಂಧವರನ್ನು ಗೌರವಿಸುತ್ತಾರೆ. ನಂತರ ಹಿಂದೂ ಮುಸ್ಲಿಂ ಅಷ್ಟೇ ಅಲ್ಲ, ಜೈನ, ಕೊಂಕಣಿ ಕುಟುಂಬಗಳೆಲ್ಲವೂ ಸೇರಿ ಹನುಮಂತನ ಜಾತ್ರೆಯನ್ನು ಸಂಭ್ರಮ, ಸಡಗರದಲ್ಲಿ ಅದ್ಧೂರಿಯಾಗಿ ಆಚರಿಸುತ್ತಾರೆ.
ಹೌದು, ಉತ್ತರಕನ್ನಡ(Uttara Kannada) ಜಿಲ್ಲೆಯ ಭಟ್ಕಳದ ಪ್ರಸಿದ್ಧ ಚೆನ್ನಪಟ್ಟಣ ಹನುಮಂತ ದೇವರ ಜಾತ್ರೆ ಪ್ರತೀ ವರ್ಷ ರಾಮನವಮಿಯಂದು ಜರುಗುತ್ತದೆ. ಈ ಜಾತ್ರೆಯು ಸೌಹಾರ್ದತೆಯ ಪ್ರತೀಕವಾಗಿದೆ. ಏಕೆಂದರೆ, ಇಲ್ಲಿ ಜಾತ್ರೆ ಆರಂಭಿಸೋಕೆ ಮುಂಚೆ ಶ್ರೀ ಹನುಮಂತ ದೇವರ ಆಡಳಿತ ಮಂಡಳಿಯಿಂದ ಜೈನ, ಪ್ರಭು ಮತ್ತು ಇಸ್ಲಾಂ ಧರ್ಮೀಯರಿಗೆ ಆಹ್ವಾನ ನೀಡುವ ಸಂಪ್ರದಾಯವಿದೆ.
ಹರಿಹರಪುರಕ್ಕೆ ಬರುವವರು ಜಾತಿ, ಪಕ್ಷವನ್ನು ಮಠದ ಹೊರಗೇ ಬಿಟ್ಟು ಬನ್ನಿ: ಶ್ರೀಗಳು
ಅದರಂತೆ ವಾದ್ಯಗಳ ಮೂಲಕ ದೇವಾಲಯ ಆಡಳಿತ ಮಂಡಳಿ ನಗರದಲ್ಲಿ ನೆಲೆಸಿರುವ ಚರ್ಕಿನ್ ಶಾಬಂದ್ರಿ ಕುಟುಂಬದವರಿಗೆ ಕರೆ ಕೊಟ್ಟು ಬರುವುದು ವಾಡಿಕೆ. ಬ್ರಿಟಿಷರ ಕಾಲದಲ್ಲಿ ರಥೋತ್ಸವ ನಡೆಯಲು ಜಮೀನು ಬೇಕಾದಾಗ ಚರ್ಕಿನ್ ಕುಟುಂಬದ ಹಿರಿಯರು ಮುಂದೆ ಬಂದು ಜಮೀನು ಕೊಟ್ಟು ಜಾತ್ರೆ ಸುಗಮವಾಗಿ ನಡೆಯಲು ಅನುವು ಮಾಡಿ ಕೊಟ್ಟಿದ್ದರಂತೆ. ಅವರ ಆ ಮಹತ್ಕಾರ್ಯವನ್ನೂ ಈಗಲೂ ಗೌರವಿಸಿಕೊಂಡು ಬರಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ವಿಡಿಯೋದಲ್ಲಿ ವೀಕ್ಷಿಸಬಹುದಾಗಿದೆ.