Asianet Suvarna News Asianet Suvarna News

ಮೈಸೂರು ದಸರಾ: ಚಾಮುಂಡಿ ಬೆಟ್ಟ ಮುಖ್ಯ ಅರ್ಚಕ ಶಶಿಶೇಖರ ದೀಕ್ಷಿತ್‌ ಮಾತು

ಐತಿಹಾಸಿಕ 413ನೇ ದಸರಾ ಮಹೋತ್ಸವವು ನಂದಿಪೂಜೆಯೊಂದಿಗೆ ವಿಜಯ ದಶಮಿ ಮೆರವಣಿಗೆಗೆ ಮುನ್ನುಡಿಯಾಗಲಿದೆ. ಹಿಂದೂ ಸಂಪ್ರದಾಯದಲ್ಲಿ ಗಣೇಶ ಪ್ರಥಮ ಪೂಜಿತವಾಗಲಿದ್ದು, ಆದರೆ ಜಂಬೂ ಸವಾರಿಯಲ್ಲಿ ನಂದಿಗೆ ಅಗ್ರ ಪೂಜೆಯಾಗಲಿದೆ. 

ಮೈಸೂರು (ಅ.05): ಐತಿಹಾಸಿಕ 413ನೇ ದಸರಾ ಮಹೋತ್ಸವವು ನಂದಿಪೂಜೆಯೊಂದಿಗೆ ವಿಜಯ ದಶಮಿ ಮೆರವಣಿಗೆಗೆ ಮುನ್ನುಡಿಯಾಗಲಿದೆ. ಹಿಂದೂ ಸಂಪ್ರದಾಯದಲ್ಲಿ ಗಣೇಶ ಪ್ರಥಮ ಪೂಜಿತವಾಗಲಿದ್ದು, ಆದರೆ ಜಂಬೂ ಸವಾರಿಯಲ್ಲಿ ನಂದಿಗೆ ಅಗ್ರ ಪೂಜೆಯಾಗಲಿದೆ. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ ಎದುರು ನಂದಿ ಧ್ವಜಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಲಿದ್ದು, ಗೌರಿಶಂಕರ ನಗರದ ನಂದಿ ಧ್ವಜ, ವೀರಗಾಸೆ ತಂಡದವರು ಭಾಗಿಯಾಗಲಿದ್ದಾರೆ. ಜೊತೆಗೆ ದಶಕಗಳಿಂದ ಉಡಿಗಾಲ ಮಹದೇವಸ್ವಾಮಿ ನೇತೃತ್ವದ ತಂಡವು ಭಾಗಿಯಾಗಲಿದೆ. ಈ ಪೂಜೆಯು ಶುಭ ಮಕರ ಲಗ್ನದಲ್ಲಿ ಮಧ್ಯಾಹ್ನ 2.36ರಿಂದ 2.50ರವರೆಗೆ ನಡೆಯಲಿದ್ದು, ಈ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಇನ್ನು ಮೈಸೂರು ದಸರಾ ಬಗ್ಗೆ ಚಾಮುಂಡಿ ಬೆಟ್ಟ ಮುಖ್ಯ  ಅರ್ಚಕ ಶಶಿಶೇಖರ ದೀಕ್ಷಿತ್‌ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.