Asianet Suvarna News Asianet Suvarna News

'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಎಂದು ಕಾಲೇಜಿಗೆ ಎಂಟ್ರಿಕೊಟ್ಟ ಚಂದನ್‌ ಶೆಟ್ಟಿ

ರಾಪ್ ಸ್ಟಾರ್ ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರೋ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. ಆ ಚಿತ್ರಕ್ಕೆ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಎಂದು ಹೆಸರಿಟ್ಟಿದ್ದು, ಯೂತ್ಸ್ಗೆ ಹೊಸ ಕ್ರೇಜ್ ಸೃಷ್ಟಿಸೋ ಮುನ್ಸೂಚನೆ ಕೊಟ್ಟಿದ್ದಾರೆ ಚಂದನ್ ಶೆಟ್ಟಿ. 

'ಚಂದ್ರಮುಖಿ-2' ಅಬ್ಬರ ಶುರು..!: ಸಿನಿ ರಂಗದಲ್ಲಿ ಈಗ ಚಂದ್ರಮುಖಿ2 ಭಯ ಶುರುವಾಗಿದೆ. ಸೂಪರ್ ಹಿಟ್ ಸಿನಿಮಾ ಚಂದ್ರಮುಖಿ ಸೀಕ್ವೆಲ್ ಚಂದ್ರಮುಖಿ2. ನಟ ರಾಘವ್ ಲಾರೆನ್ಸ್ ಹಾಗು ಕಂಗಾನ ರಣಾವತ್ ನಟನೆಯ ಈ ಸಿನಿಮಾಡು ಹಾಡುಗಳು ಬಿಡುಗಡೆ ಆಗಿವೆ. 2005ರಲ್ಲಿ ಬಿಡುಗಡೆಯಾಗಿದ್ದ 'ಚಂದ್ರಮುಖಿ' ಸಿನಿಮಾ ಭಾರೀ ಯಶಸ್ಸು ಪಡೆದಿತ್ತು. ಈಗ ಈ ಸಿನಿಮಾದ ಸಿಕ್ವೇಲ್ ತೆರೆ ಮೇಲೆ ಬರಲು ರೆಡಿಯಾಗುತ್ತಿದೆ.

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಂದನ್ ಶೆಟ್ಟಿ ಹೀರೋ.!: ರಾಪ್ ಸ್ಟಾರ್ ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರೋ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. ಆ ಚಿತ್ರಕ್ಕೆ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಎಂದು ಹೆಸರಿಟ್ಟಿದ್ದು, ಯೂತ್ಸ್ಗೆ ಹೊಸ ಕ್ರೇಜ್ ಸೃಷ್ಟಿಸೋ ಮುನ್ಸೂಚನೆ ಕೊಟ್ಟಿದ್ದಾರೆ ಚಂದನ್ ಶೆಟ್ಟಿ. ವಿಶೇಷ ಅಂದ್ರೆ ಈ ಟೈಟಲ್ಅನ್ನ ಕಾಲೇಜ್ ವಿದ್ಯಾರ್ಥಿಗಳೇ ಬಿಡುಗಡೆ ಮಾಡಿದ್ದಾರೆ. ಯುವ ಡೈರೆಕ್ಟರ್ ಅರುಣ್ ಅಮುಕ್ತ ಅವರು ನಿರ್ದೇಶನ ಮಾಡುತ್ತಿದ್ದಾರೆ.

'ಘೋಸ್ಟ್‌' ಶಿವಣ್ಣ ಎಂಟ್ರಿಗೆ ಡೇಟ್‌ ಫಿಕ್ಸ್‌..!: ಕರುನಾಡ ಚಕ್ರವರ್ತಿ ಡಾಕ್ಟರ್ ಶಿವರಾಜ್ ಕುಮಾರ್ ಅವರ ಮೋಸ್ಟ್ ವಾಂಟೆಡ್ ಸಿನಿಮಾ ಘೋಸ್ಟ್. ಶ್ರೀನಿ ನಿರ್ದೇಶನದ ಈ ಸಿನಿಮಾ ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಸಿದ್ಧವಾಗಿದೆ. ಇದೀಗ ಘೋಸ್ಟ್ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಅಕ್ಟೋಬರ್ 19ರಂದು ವಿಶ್ವದಾದ್ಯಂತ ಚಿತ್ರ ತೆರೆ ಕಾಣುತ್ತಿದೆ. 

ಮಲೈಕಾ ಅರ್ಜುನ್ ಕಪೂರ್ ಬ್ರೇಕಪ್.?: ಬಾಲಿವುಡ್‌ನ ಹಾಟ್ ಪೇರ್ ಮಲೈಕಾ ಅರೋರಾ ಹಾಗು ಅರ್ಜುನ್ ಕಪೂರ್ ಪ್ರೀತಿಸುತ್ತಿದ್ರು, ಒಟ್ಟಿಗೆ ಓಡಾಡುತ್ತಿದ್ರು. ಡೇಟಿಂಗ್ ಮಾಡುತ್ತಿದ್ರು. ಆದ್ರೆ ಈಗ ಇಬ್ಬರ ಪ್ರೀತಿಗೆ ಬೇಕಪ್ ಮುದ್ರೆ ಬಿದ್ದಿದೆ ಅಂತ ಹೇಳಲಾಗ್ತಿದೆ. ಯಾಕಂದ್ರೆ ನಟಿ ಮಲೈಕಾ ಅರೋರಾ ಕಪೂರ್ ಕುಟುಂಬದವರನ್ನು ಸೋಷಿಯಲ್ ಮೀಡಿಯಾದಲ್ಲಿ ಅನ್ಫಾಲೋ ಮಾಡಿದ್ದಾರೆ. ಅರ್ಜುನ್ ಕಪೂರ್ ಹಾಗೂ ಮಲೈಕಾ ಮಧ್ಯೆ ಸಾಕಷ್ಟು ವಯಸ್ಸಿನ ಅಂತರ ಇದೆ. ಅರ್ಜುನ್ ಕಪೂರ್ಗೆ ಈಗ 38 ವರ್ಷ ವಯಸ್ಸು. ಮಲೈಕಾಗೆ 49 ವರ್ಷ.

Video Top Stories