Asianet Suvarna News Asianet Suvarna News

'ಛೂ ಮಂತರ್' ಎಂದು ನಗಿಸಿ ಭಯ ಹುಟ್ಟಿಸ್ತಾರೆ: ತೆರೆ ಮೇಲೆ ಮತ್ತೆ ಒಂದಾದ ಶರಣ್-ಚಿಕ್ಕಣ್ಣ!

ಕಾಮಿಡಿ ಅಧ್ಯಕ್ಷ ಶರಣ್ ಕಾಮಿಡಿ ಉಪಾಧ್ಯಕ್ಷ ಚಿಕ್ಕಣ್ಣ. ಅಬ್ಬಬ್ಬಾಬ್ಬಾ..! ಅಂದೆಂಥಾ ಕಾಂಬಿನೇಷನ್ ಅಲ್ವಾ.. ಶರಣ್ ಚಿಕ್ಕಣ ಒಬ್ರು ಒಂದಾದ್ರೆ ಏನೆಲ್ಲಾ ಆಗುತ್ತೆ ಅಂತ ಅಧ್ಯಕ್ಷ ಸಿನಿಮಾದಲ್ಲಿ ನೀವೆಲ್ಲಾ ನೋಡಿದ್ದೀರಾ..? ಇದೀಗ ಇದೇ ಜೋಡಿ ಬೆಳ್ಳಿತೆರೆ ಮೇಲೆ ಛೂ ಮಂತರ್ ಅಂತ ಜಾದು ಮಾಡೋಕೆ ರೆಡಿಯಾಗಿದ್ದಾರೆ. 

ಕಾಮಿಡಿ ಅಧ್ಯಕ್ಷ ಶರಣ್ ಕಾಮಿಡಿ ಉಪಾಧ್ಯಕ್ಷ ಚಿಕ್ಕಣ್ಣ. ಅಬ್ಬಬ್ಬಾಬ್ಬಾ..! ಅಂದೆಂಥಾ ಕಾಂಬಿನೇಷನ್ ಅಲ್ವಾ.. ಶರಣ್ ಚಿಕ್ಕಣ ಒಬ್ರು ಒಂದಾದ್ರೆ ಏನೆಲ್ಲಾ ಆಗುತ್ತೆ ಅಂತ ಅಧ್ಯಕ್ಷ ಸಿನಿಮಾದಲ್ಲಿ ನೀವೆಲ್ಲಾ ನೋಡಿದ್ದೀರಾ..? ಇದೀಗ ಇದೇ ಜೋಡಿ ಬೆಳ್ಳಿತೆರೆ ಮೇಲೆ ಛೂ ಮಂತರ್ ಅಂತ ಜಾದು ಮಾಡೋಕೆ ರೆಡಿಯಾಗಿದ್ದಾರೆ. ಹಾಗಾದ್ರೆ ಉಧ್ಯಕ್ಷ, ಉಪಾಧ್ಯಕ್ಷರ ಜಾದು ಹೇಗಿರುತ್ತೆ.? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ. ಸ್ಯಾಂಡಲ್‌ವುಡ್‌ನ ಅಧ್ಯಕ್ಷ ಉಪಾಧ್ಯಕ್ಷ ಶರಣ್ - ಚಿಕ್ಕಣ್ಣ ಒಂದಾದ್ರೆ ಅಲ್ಲಿ ಕಾಮಿಡಿ ಜಾದು ಕ್ರಿಯೆಟ್ ಆಗೋದು ಪಕ್ಕಾ.. ಇದೀಗ ಈ ಕಾಮಿಡಿ ಜೋಡಿ ಮತ್ತೆ ಒಂದಾಗಿದೆ. ಛೂ ಮಂತರ್ ಎಂದು ಮತ್ತೆ ಕಮಾಲ್ ಮಾಡಲು ಬರುತ್ತಿದ್ದಾರೆ ಶರಣ್ ಚಿಕ್ಕಣ್ಣ. ಈ ಬಾರಿ ಕಾಮಿಡಿ ಜೊತೆಗೆ ಭಯವನ್ನೂ ಹುಟ್ಟಿಸುತ್ತಿದ್ದಾರೆ. ಆ ಸಿನಿಮಾವೇ ಛೂ ಮಂತರ್. ಛೂ ಮಂತರ್ ಕಾಮಿಡಿ ಸಸ್ಪೆನ್ಸ್ ಹಾರರ್ ಮೂವಿ. ಶರಣ್ ಈ ಸಿನಿಮಾದಲ್ಲಿ ಜಾದುಗಾರನ ಹಾಗೆ ಕಾಣಿಸಿಕೊಂಡಿದ್ದಾರೆ. 

ಚಿತ್ರದಲ್ಲಿ ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ ನಾಯಕಿಯರಾಗಿ ನಟಿಸಿದ್ದಾರೆ. ಶರಣ್ ಜೊತೆ ಕಾಮಿಡಿ ಕಳಗುಳಿ ಇಡಲು ಮತ್ತೊಮ್ಮೆ ಚಿಕ್ಕಣ್ಣ ಕೈ ಜೋಡಿಸಿದ್ದಾರೆ. ಸದ್ಯ ಚಿತ್ರದ ಫಸ್ಟ್‌ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. 'ಕರ್ವ' ಎನ್ನುವ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕಟ್ಟಿಕೊಟ್ಟಿದ್ದ ನವನೀತ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. 'ಛೂ ಮಂತರ್' ಚಿತ್ರಕ್ಕೆ ತರುಣ್ ಶಿವಪ್ಪ ಬಂಡವಾಳ ಹೂಡಿದ್ದು ಇದು ಅವರ ಬ್ಯಾನರ್‌ನ 5ನೇ ಸಿನಿಮಾ ಇದು. ಒಂದು ಬೂತ ಬಂಗಲೆ. ಆ ಬಂಗಲೆಯಲ್ಲಿ ಎದುರಾಗುವ ಸಮಸ್ಯೆಗಳ ಸುತ್ತಾ ಈ ಸಿನಿಮಾ ಸುತ್ತುತ್ತದೆ ಎನ್ನುವುದು ಮೋಷನ್ ಪೋಸ್ಟರ್‌ನಲ್ಲಿ ಅರ್ಥವಾಗ್ತಿದೆ. ಚಿತ್ರದಲ್ಲಿ ಪ್ರಭು ಮುಂಡ್ಕರ್, ರಜಿನಿಕಾ ಭಾರಧ್ವಜ್ ಸೇರಿದಂತೆ ದೊಡ್ಡ ತಾರಾಗಣವೂ ಇದೆ. 'ಛೂ ಮಂತರ್' ಚಿತ್ರೀಕರಣ ಮುಗಿದಿದ್ದು ಸಧ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment