Asianet Suvarna News Asianet Suvarna News

'ಕೋಟಿಗೊಬ್ಬ-3' ಷಡ್ಯಂತ್ರ ಹೆಣೆದವರ ಟಾರ್ಗೆಟ್ ಹೀರೋನಾ..? ನಿರ್ಮಾಪಕರಾ..?

Oct 17, 2021, 12:00 PM IST

ಬೆಂಗಳೂರು (ಅ. 17): ಅ.14 ರಂದು ತೆರೆಕಾಣಬೇಕಾಗಿದ್ದ ‘ಕೋಟಿಗೊಬ್ಬ-3’ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವಂತೆ ಮಾಡಿದ್ದರಲ್ಲಿ ಕೆಲವು ವಿತರಕರ ಪಾತ್ರವಿದೆ. ಅವರ ಈ ಕೃತ್ಯ ನಿರ್ಮಾಪಕನಿಗೆ ಮಾಡಿರುವ ನಂಬಿಕೆ ದ್ರೋಹ’ ಎಂದು ಖ್ಯಾತ ನಟ ಸುದೀಪ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಕೋಟಿಗೊಬ್ಬ -3 ಸಿನಿಮಾ ಗೆದ್ದಿದೆ, ಒಂದೊಳ್ಳೆ ಎಕ್ಸ್‌ಪೀರಿಯನ್ಸ್ ಆಯ್ತು: ಕಿಚ್ಚ ಸುದೀಪ್

ಹಿರಿಯ ವಿತರಕರು ‘ಭೂಮಿಕಾ’ ಚಿತ್ರಮಂದಿರಕ್ಕೆ ಫೋನ್‌ ಮಾಡಿ ಚಿತ್ರ ತೆರೆಕಾಣದಂತೆ ತಡೆಹಿಡಿದಿದ್ದಾರೆ. ನಿಗದಿತ ದಿನಾಂಕದಂದು ಚಿತ್ರ ಬಿಡುಗಡೆಯಾಗದಂತೆ ಷಡ್ಯಂತ್ರ ರೂಪಿಸಲಾಗಿತ್ತು ಎಂದು ಸುದೀಪ್‌ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಏನಿದು ಕೋಟಿಗೊಬ್ಬ-3 ಷಡ್ಯಂತ್ರ..? ಇಲ್ಲಿದೆ ಇನ್‌ಸೈಡ್ ಸ್ಟೋರಿ..!