ಡ್ರಗ್ಸ್ ಬಗ್ಗೆ ಗೊತ್ತೂ ಇಲ್ಲ, ಹಣವೂ ಇಲ್ಲ, ಸಮಯವೂ ಇಲ್ಲ: ದೊಡ್ಡಣ್ಣ
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್‌ನಲ್ಲಿಂದು ಮಹತ್ವದ ಸಭೆ ನಡೆದಿದೆ.
ಬೆಂಗಳೂರು (ಸೆ. 02): ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್‌ನಲ್ಲಿಂದು ಮಹತ್ವದ ಸಭೆ ನಡೆದಿದೆ.
ನಟ ದೊಡ್ಡಣ್ಣ ಮಾತನಾಡಿ, 'ನಾವು 80 ರ ದಶಕದಲ್ಲಿ ಇಂಡಸ್ಟ್ರಿಗೆ ಬಂದವರು. ಇದ್ದ ಸರ್ಕಾರಿ ನೌಕರಿ ಬಿಟ್ಟು ಇದನ್ನ ನಂಬಿ ಬಂದವರು. ನಮಗೆ ಡ್ರಗ್ಸ್ ಬಗ್ಗೆಯೆಲ್ಲಾ ಗೊತ್ತಿಲ್ಲ. ಚಿತ್ರರಂಗ, ಚಿತ್ರರಂಗ ಅನ್ನೋದು ಸರಿಯಲ್ಲ. ತಪ್ಪಿತಸ್ಥರು ಯಾರೇ ಇರಲಿ, ಅವರಿಗೆ ಶಿಕ್ಷೆ ಕೊಡಿ' ಎಂದು ಹೇಳಿದ್ದಾರೆ.