'ಸ್ಕೂಲ್ ಶುರು ಮಾಡಬೇಡ್ರಿ, ನಾವು ಆನ್‌ಲೈನ್ ಕ್ಲಾಸ್ ಕೇಳಿ ಹೋಂ ವರ್ಕ್ ಮಾಡ್ತೀವ್ರಿ'
ಶಾಲೆಗಳ ಪುನಾರಂಭ ಬಗ್ಗೆ ಬೇಕು, ಬೇಡಗಳ ಚರ್ಚೆ ನಡೆಯುತ್ತಿದೆ. ಪೋಷಕರಿಂದ ವಿರೋಧ ಕೂಡಾ ವ್ಯಕ್ತವಾಗುತ್ತಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಿ ಅಪಾಯಕ್ಕೆ ದೂಡುವುದು ಹೇಗೆ ಎಂದು ಆತಂಕದಲ್ಲಿದ್ದಾರೆ. ಹೀಗಿರುವಾಗ ವಿಜಯಪುರದ ಪುಟಾಣಿಗಳು ಮಾತನಾಡಿದ್ದಾರೆ.
ಬೆಂಗಳೂರು (ಅ. 08): ಶಾಲೆಗಳ ಪುನಾರಂಭ ಬಗ್ಗೆ ಬೇಕು, ಬೇಡಗಳ ಚರ್ಚೆ ನಡೆಯುತ್ತಿದೆ. ಪೋಷಕರಿಂದ ವಿರೋಧ ಕೂಡಾ ವ್ಯಕ್ತವಾಗುತ್ತಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಿ ಅಪಾಯಕ್ಕೆ ದೂಡುವುದು ಹೇಗೆ ಎಂದು ಆತಂಕದಲ್ಲಿದ್ದಾರೆ. ಹೀಗಿರುವಾಗ ವಿಜಯಪುರದ ಪುಟಾಣಿಗಳು ಮಾತನಾಡಿದ್ದಾರೆ.
'ಸ್ಕೂಲ್ ಶುರು ಮಾಡಬೇಡ್ರಿ. ಕೊರೋನಾ ಇದೆಯಲ್ರಿ, ಒಬ್ಬರಿಗೆ ಕೊರೊನಾ ಬಂದ್ರೆ ಎಲ್ಲರಿಗೂ ಬರುತ್ತಲ್ರೀ... ನಾವು ಮನೇಲೆ ಆನ್‌ಲೈನ್ ಕ್ಲಾಸ್ ಕೇಳ್ತೀವಿ. ಹೋಂವರ್ಕ್ ಮಾಡ್ತೀವ್ರಿ' ಎಂದು ಪುಟಾಣಿಗಳು ಹೇಳಿದ್ದಾರೆ.