Asianet Suvarna News Asianet Suvarna News

ಮಕ್ಕಳನ್ನು ಧೈರ್ಯದಿಂದ ಶಾಲೆಗೆ ಕಳಿಸಿ, ಮಕ್ಕಳ ಸುರಕ್ಷತೆ ನಮ್ಮ ಹೊಣೆ: ಸುರೇಶ್

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ಮಾತ್ರ ತರಗತಿಗಳು ಆರಂಭವಾಗಲಿವೆ. 6 ರಿಂದ 9 ನೇ ತರಗತಿಗೆ 'ವಿದ್ಯಾಗಮ' ಯೋಜನೆ ಶುರುವಾಗಲಿದೆ. ಸರ್ಕಾರದ ಮಾರ್ಗಸೂಚಿಯಂತೆ ಶಾಲಾ- ಕಾಲೇಜು ಆವರಣದಲ್ಲಿ ಸ್ಯಾನಿಟೈಸ್ ಮಾಡಲಾಗಿದೆ.

ಬೆಂಗಳೂರು (ಜ. 01): 10 ತಿಂಗಳುಗಳಿಂದ  ಬಂದ್ ಆಗಿದ್ದ  ರಾಜ್ಯದ ಎಲ್ಲಾ  ಶಾಲೆ- ಪಿಯು ಕಾಲೇಜುಗಳು  ಪುನಾರಂಭಗೊಂಡಿವೆ. ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಸಕಲ ಸಿದ್ಧತೆ ಹಾಗೂ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಶಾಲಾ- ಕಾಲೇಜು ಆವರಣವನ್ನು  ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. 

ಇಂದಿನಿಂದ ಶಾಲೆ, ಕಾಲೇಜುಗಳ ಪುನಾರಂಭ; ವಿದ್ಯಾರ್ಥಿಗಳಿಗೆ ಈ ಷರತ್ತುಗಳು ಅನ್ವಯ!

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ಮಾತ್ರ ತರಗತಿಗಳು ಆರಂಭವಾಗಲಿವೆ. 6 ರಿಂದ 9 ನೇ ತರಗತಿಗೆ 'ವಿದ್ಯಾಗಮ' ಯೋಜನೆ ಶುರುವಾಗಲಿದೆ. ಸರ್ಕಾರದ ಮಾರ್ಗಸೂಚಿಯಂತೆ ಶಾಲಾ- ಕಾಲೇಜು ಆವರಣದಲ್ಲಿ ಸ್ಯಾನಿಟೈಸ್ ಮಾಡಲಾಗಿದೆ. ಮಕ್ಕಳನ್ನು ಧೈರ್ಯದಿಂದ ಶಾಲೆಗೆ ಕಳಿಸಿ, ಮಕ್ಕಳ ಸುರಕ್ಷತೆ ನಮ್ಮ ಹೊಣೆ. ಪೋಷಕರು ಹೆದರುವ ಅಗತ್ಯ ಇಲ್ಲ. ಮಕ್ಕಳ ಸುರಕ್ಷತೆ ನಮ್ಮ ಹೊಣೆ. 2021 ಎಲ್ಲರಿಗೂ ಶುಭ ತರಲಿ. ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ' ಎಂದು ಹಾರೈಸಿದ್ಧಾರೆ. 

 

Video Top Stories