ಗವಿಮಠಕ್ಕೆ ಹರಿದುಬರುತ್ತಿದೆ ನೆರವಿನ ಮಹಾಪೂರ, ತಲೆ ಎತ್ತುತ್ತಿದೆ 5 ಸಾವಿರ ವಿದ್ಯಾರ್ಥಿಗಳ ಕನಸಿನ ದೇಗುಲ

5 ಸಾವಿರ ವಿದ್ಯಾರ್ಥಿಗಳ ಪ್ರಸಾದ ಮತ್ತು ವಸತಿನಿಲಯ ನಿರ್ಮಾಣಕ್ಕೆ ಮುಂದಾಗಿರುವ ಗವಿಸಿದ್ಧೇಶ್ವರ ಸ್ವಾಮಿಗಳ ಕಣ್ಣೀರಿಗೆ ಕರಗಿರುವವರಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಗವಿಸಿದ್ದೇಶ್ವರ ಸ್ವಾಮೀಜಿ ಕನಸಿನ ದೇವಾಲಯಕ್ಕಾಗಿ ಸಿಎಂ ಬೊಮ್ಮಾಯಿ 10 ಕೋಟಿ ರೂಪಾಯಿಯನ್ನು ಸರ್ಕಾರದಿಂದ ಬಿಡುಗಡೆ ಮಾಡಿದ್ದಾರೆ. 

First Published Jul 13, 2022, 4:47 PM IST | Last Updated Jul 13, 2022, 5:07 PM IST

5 ಸಾವಿರ ವಿದ್ಯಾರ್ಥಿಗಳ ಪ್ರಸಾದ ಮತ್ತು ವಸತಿನಿಲಯ ನಿರ್ಮಾಣಕ್ಕೆ ಮುಂದಾಗಿರುವ ಗವಿಸಿದ್ಧೇಶ್ವರ ಸ್ವಾಮಿಗಳ (Gavi Mutt) ಕಣ್ಣೀರಿಗೆ ಕರಗಿರುವವರಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಗವಿಸಿದ್ದೇಶ್ವರ ಸ್ವಾಮೀಜಿ ಕನಸಿನ ದೇವಾಲಯಕ್ಕಾಗಿ ಸಿಎಂ ಬೊಮ್ಮಾಯಿ 10 ಕೋಟಿ ರೂಪಾಯಿಯನ್ನು ಸರ್ಕಾರದಿಂದ ಬಿಡುಗಡೆ ಮಾಡಿದ್ದಾರೆ. 

ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಗವಿ ಮಠದ ಶ್ರೀಗಳು; ಕೇಳಿ ಕ್ರಾಂತಿಯ ಕಥೆ!

ತಮ್ಮ ಶಕ್ತಿಯನ್ನೂ ಮೀರಿ ಬಡ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು ಅನ್ನೋದು ಶ್ರೀಗಳ ಕನಸು.  ಗವಿಮಠ ಶ್ರೀಗಳು ಶಿಕ್ಷಣ ಮಹತ್ವನ್ನು ಚನ್ನಾಗಿ ಅರಿತವರು. ಅದಕ್ಕಾಗಿಯೇ ಶ್ರೀಗಳ ಮನಸ್ಸು ಹಗಲಿರುಳು ಮಕ್ಕಳ ಶಿಕ್ಷಣಕ್ಕಾಗಿ ಹಂಬಲಿಸುತ್ತಿರುತ್ತದೆ. ಕೊಪ್ಪಳದ ಗವಿಮಠ ಸಂಸ್ಥಾನ ಇಲ್ಲಿವರೆಗೂ 17 ಪೀಠಾಧಿಪತಿಗಳನ್ನು ಕಂಡಿದೆ. ಗವಿಸಿದ್ದೇಶ್ವರ  ಶ್ರೀಗಳು ಈ ಮಠಕ್ಕೆ 18ನೇ ಪೀಠಾಧಿಪತಿಯಾಗಿ 2002ರ ಡಿಸೆಂಬರ್ನಲ್ಲಿ ಪೀಠವನ್ನು ಅಲಂಕರಿಸುತ್ತಾರೆ.  ಶ್ರೀಗಳಿಗೆ ವಿದ್ಯಾಭ್ಯಾಸದ ಬಗ್ಗೆ ಎದೆಷ್ಟು ಕಾಳಜಿಯಂದ್ರೆ, ಅವರು ಪೀಠವನ್ನು ಅಲಂಕರಿಸಿದ ಒಂದೇ ವರ್ಷದಲ್ಲಿ ಗವಿಮಠದ ಆಶ್ರಯಲದಲ್ಲಿ 160 ಮಕ್ಕಳಿಗೆ ಶಿಕ್ಷಣದ ಅನುಕೂಲ ಮಾಡಿಕೊಡ್ತಾರೆ 

20 ವರ್ಷಗಳ ಹಿಂದೆ ಹೀಗೆ ಶುರುವಾದ 160 ಮಕ್ಕಳಿಂದ ಶುರುವಾಗಿ 2 ಸಾವಿರ ಆಯ್ತು. ಈಗ ಗವಿಮಠದಲ್ಲಿ ಸುಮಾರು ಮೂರುವರೆ ಸಾವಿರ ಮಕ್ಕಳು ಮಠದ ಆಶ್ರಯದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಅವರಿಗೆಲ್ಲ ಜಾಗ ಸಾಲದಂತಾಗಿದೆ. 

ಕೊಪ್ಪಳ ಗವಿಮಠಕ್ಕೆ ಅಮೆರಿಕದ 10 ನೇ ತರಗತಿ ವಿದ್ಯಾರ್ಥಿ 50 ಸಾವಿರ ನೆರವು

ಮಕ್ಕಳ ವಾಸಕ್ಕೆ ಮಠದ ಅಂಗಳದಲ್ಲಿ ಎಲ್ಲೆಲ್ಲಿ ಜಾಗವಿದೆಯೋ ಅಲ್ಲೆಲ್ಲ ಮಕ್ಕಳಿಗೆ ಜಾಗ ಕೊಟ್ಟಾಗಿದೆ. ಆದ್ರೂ ಸಹ ಜಾಗ ಸಾಲುತ್ತಿಲ್ಲ. ವೇಟಿಂಗ್ ಲಿಸ್ಟ್ನಲ್ಲಿ 400 ರಿಂದ 450 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳು ವೇಟ್ ಮಾಡ್ತಿರೋದು ಶ್ರೀಗಳ ನಿದ್ದೆಗೆಡಿಸಿದೆ. ಅದಕ್ಕಾಗಿ ಶ್ರೀಗಳು ಒಂದು ಧೈರ್ಯ ಮಾಡುತ್ತಾರೆ. ಕಳೆದ ಜೂನ್ 23ನೇ ತಾರೀಕು ತಮ್ಮ ಗುರುಗಳಾದ ಮರಿ ಶಾಂತವೀರ ಮಹಾಸ್ವಾಮಿಗಳು ಪುಣ್ಯಸ್ಮರಣೆಯ ದಿನವಾಗಿತ್ತು. ಈ ಒಳೇ ದಿನದಂದು ಸುಮಾರು ಮೂರು 5 ಸಾವಿರ ಮಕ್ಕಳಿಗೆ ಉಚಿತ ವಸತಿ ಮತ್ತು ಅನ್ನ ಪ್ರಸಾದ ನಿಲಯಕ್ಕಾಗಿ ಶ್ರೀಗಳು ಭೂಮಿಪೂಜೆ ಮಾಡಿದ್ದಾರೆ. ಅವರ ಕನಸಿಗೆ ಮತ್ತಷ್ಟು ಬಲ ಬಂದಿದೆ. ಗವಿಸಿದ್ದೇಶ್ವರ ಸ್ವಾಮೀಜಿ ಕಣ್ಣೀರಿಗೆ ಭಕ್ತಗಣ ಕರಗಿದೆ. ಕೋಟಿ ಕೋಟಿ ದುಡ್ಡು ಹರಿದು ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ 5 ಸಾವಿರ ಮಕ್ಕಳಿಗೆ ಗವಿಮಠ ಗುರುಕುಲ ಸಿದ್ಧವಾಗಲಿದೆ.