Asianet Suvarna News Asianet Suvarna News

ಪಿಇಎಸ್ ವಿಶ್ವವಿದ್ಯಾಲಯದಲ್ಲಿ 6ನೇ ಘಟಿಕೋತ್ಸವ

Nov 16, 2021, 10:28 AM IST

ಬೆಂಗಳೂರು (ನ.16):  ಬನಶಂಕರಿ ಮೂರನೇ ಹಂತದಲ್ಲಿರುವ ಪಿಇಎಸ್ ವಿಶ್ವವಿದ್ಯಾಲಯ ತನ್ನ 6ನೇ ಘಟಿಕೋತ್ಸವ ಆಚರಿಸಿಕೊಂಡಿದೆ. ಈ ಸಂಭ್ರಮಕ್ಕೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಾಕ್ಷಿಯಾಗಿದ್ದಾರೆ.  ಈ ಸಮಾರಂಭದಲ್ಲಿ 24 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಣೆ ಮಾಡಲಾಯಿತು.  

Letter and Names: ಮೊದಲ ಅಕ್ಷರ ಈ ಆಗಿದ್ರೆ ಕರಿಯರ್ ಸೂಪರ್!

ಸಮಾರಂಭದಲ್ಲಿ ಕುಲಾಧಿಪತಿ ಎಂಅರ್‌ ದೊರೆಸ್ವಾಮಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದು 2400 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಬೇರೆ ಬೇರೆ ವಿಷಯಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಗೋಲ್ಡ್ ಮೆಡಲ್ ನೀಡಲಾಗಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗಿದೆ. ಪದವಿಧರರಾದ ಮೇಲೆ ಅವರ ಜವಾಬ್ದಾರಿ ಹೆಚ್ಚಿದೆ ಎಂದು ಕುಲಾಧಿಪತಿ ದೊರೆಸ್ವಾಮಿ ಹೇಳಿದರು.