Asianet Suvarna News Asianet Suvarna News

ಉತ್ತರ ಕನ್ನಡ; ಸಿದ್ದಾಪುರ ಕುಗ್ರಾಮದ ಅರ್ಚಕರ ಮನೆಯಲ್ಲಿ ಗಾಂಜಾ ಘಾಟು

* ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಅರ್ಚಕರ ಮನೆಯಲ್ಲಿ ಗಾಂಜಾ
* ಗಾಂಜಾ ವ್ಯವಹಾರ ಮಾಡುತ್ತಿದ್ದ  ಕುಡಗುಂದ ಮಾಯ್ನೇರಮನೆಯ ಚಂದ್ರಶೇಖರ ಭಟ್ ಬಂಧನ
* ಸ್ಥಳೀಯ ದೇವಸ್ಥಾನದ ಪೂಜೆ ಮಾಡಿಕೊಂಡಿದ್ದ ಚಂದ್ರಶೇಖರ್ ಭಟ್
* ಮಾಹಿತಿ ಮೇರೆಗೆ ಅರ್ಚಕರ ಮನೆಗೆ ಏಕಾಏಕಿ ದಾಳಿ 

ಉತ್ತರ ಕನ್ನಡ/ ಸಿದ್ದಾಪುರ(ಸೆ. 30)  ಸಿದ್ದಾಪುರದ (Siddapur) ಅರ್ಚಕರ ಮನೆಯಲ್ಲಿ ಗಾಂಜಾ(Drugs) ವಾಸನೆ ಪೊಲೀಸರಿಗೆ ಹೊಡೆದಿದೆ ಗಾಂಜಾ ವ್ಯವಹಾರ ಮಾಡುತ್ತಿದ್ದ  ಕುಡಗುಂದ ಮಾಯ್ನೇರಮನೆಯ ಚಂದ್ರಶೇಖರ ಭಟ್  ಎಂಬುವರನ್ನು ಬಂಧಿಸಲಾಗಿದೆ.

ಸಿದ್ದಾಪುರ ತಾಲೂಕಿನ ಕುಗ್ರಾಮ ಮಾಯ್ನೇರ್‌ಮನೆ ನಿವಾಸಿ ಭಟ್ ಸ್ಥಳೀಯ ದೇವಸ್ಥಾನದ ಪೂಜಾರಿಯಾಗಿದ್ದರು. ಮಾಹಿತಿ ಮೇರೆಗೆ ಅರ್ಚಕರ ಮನೆಗೆ ಏಕಾಏಕಿ ದಾಳಿ ಮಾಡಿದ ಶಿರಸಿಯ(Sirsi) ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಗಾಂಜಾ ಸಿಕ್ಕಿದೆ. ಖಚಿತ ಮಾಹಿತಿ ಪಡೆದ ಅಬಕಾರಿ ಡಿ.ಎಸ್.ಪಿ. ಮಹೇಂದ್ರ ನಾಯ್ಕ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ. ಸಿಬ್ಬಂದಿ ಆರ್.ವಿ. ತಳೇಕರ್, ಎನ್.ಕೆ. ವೈದ್ಯ, ಲೋಕೇಶ್ವರ ಬೋರ್ಕರ್, ಗಜಾನನ ನಾಯ್ಕ, ಅಬ್ದುಲ್ ಮಕಾನದಾರ್, ಈರಣ್ಣ ಗಾಳಿ ಮತ್ತು ಧ್ರುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಗಾಂಜಾ ಬೆಳೆಯಲು ಕೃತಕ ವಾತಾವರಣವನ್ನೇ ನಿರ್ಮಿಸಿಕೊಂಡಿದ್ದರು

ಅಧಿಕಾರಿಗಳು ಮನೆ ಶೋಧಕ್ಕಿಳಿದಾಗ ಏನೇನೋ ದಡಬಡಾಯಿಸಿದ ಆರೋಪಿ ಬಳಿಕ ಶೋಧಕ್ಕೆ ಅನುಮತಿ ನೀಡಿದ್ದ. ಎಲ್ಲಿಯೂ ಗಾಂಜಾ ಸಿಗದೇ ಇದ್ದಾಗ ಕೊನೆಗೆ ಆರೋಪಿಯ ಅಡುಗೆ ಕೊಣೆಗೆ ಹೊಕ್ಕಿದ್ದ ಸಿಬ್ಬಂದಿಗೆ ವಾಸನೆ ಬಡಿದಿತ್ತು. ಅಡುಗೆ ಮನೆಯ ಗ್ಯಾಸ್ ಕಟ್ಟೆಯ ಕೆಳಗಡೆ ಗಾಂಜಾ ಬಚ್ಚಿಡಲಾಗಿತ್ತು. 140 ಗ್ರಾಂ ಗಾಂಜಾ ಪ್ಯಾಕೇಟನ್ನು ಅಡುಗೆ ಮನೆಯ ಡಬ್ಬಾದಲ್ಲಿ ಪ್ಯಾಸ್ಟಿಕ್ ಚೀಲದಲ್ಲಿ ತುಂಬಿಡಲಾಗಿತ್ತು.

ಆರೋಪಿ ಚಂದ್ರಶೇಖರ್ ಭಟ್ ಈ ಹಿಂದಿನಿದಲೂ ಗಾಂಜಾ ಮಾರಾಟ ಮಾಡುವ ಬಗ್ಗೆ ಅನುಮಾನವಿತ್ತು. ಮನೆಯ ಬಳಿ ಕೆಲವು ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡುವ ಮಾಹಿತಿ ಕೂಡಾ ಲಭಿಸಿತ್ತು. ಕೊನೆಗೆ ಖಚಿತ ಮಾಹಿತಿ ಪಡೆದು ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಧಿಕಾರಿಗಳ ದಾಳಿ ನಡೆಯುವ ದಿನವೂ ಮೂರ್ನಾಲ್ಕು ಕಾಲೇಜು ವಿದ್ಯಾರ್ಥಿಗಳು ಗಾಂಜಾ ಖರೀದಿಗೆ ಬಂದಿದ್ದರು ಎನ್ನಲಾಗಿದ್ದು ಅಧಿಕಾರಿಗಳ ಜೀಪ್ ಕಂಡು  ವಿದ್ಯಾರ್ಥಿಗಳು ಪರಾರಿಯಾಗಿದ್ದಾರೆ. 

Video Top Stories