Asianet Suvarna News Asianet Suvarna News
breaking news image

ಹಿಜಾಬ್ ಗಲಾಟೆ ನಂತರ ಮತ್ತೆ ಸುದ್ದಿಯಾದ ಉಡುಪಿ: ಸಣ್ಣ ಘಟನೆ ಎಂದ ಕಾಂಗ್ರೆಸ್‌..!

ವಿಡಿಯೋನೇ ಇಲ್ಲ ಅಂತಾರೆ ಪೊಲೀಸರು..ಎಲ್ಲಿ ವಿಡಿಯೋ?
ಎಲ್ಲವನ್ನೂ ಬಿಟ್ಟು ರಶ್ಮಿಗೆ ಭಯ ಪಡಿಸಲು ನಿಂತರಾ ಪೊಲೀಸರು?  
ವಾರದ ನಂತರ ಎಫ್.ಐ.ಆರ್ ದಾಖಲಿಸಿದ ಪೊಲೀಸರು..!

ಕಾಶ್ಮೀರ್ ಫೈಲ್ಸ್, ಕೇರಳ ಫೈಲ್ಸ್ ನೋಡಿದ್ದಾಯ್ತು.. ಈಗ ಉಡುಪಿ ಫೈಲ್ಸ್ (Udupi files)ಸರದಿ. ಸೂಕ್ಷ್ಮಾತಿ ಸೂಕ್ಷ್ಮ ಪ್ರದೇಶವಾಗಿರೋ ಉಡುಪಿ ಈಗ ಮತ್ತೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದೆ. ಕಾರಣ ಕಾಲೇಜುವೊಂದರಲ್ಲಿ ಮೂರು ಹುಡುಗಿಯರು ಮಾಡಿದ ಎಡವಟ್ಟು. ತಮ್ಮದೇ ಕಾಲೇಜಿನ ವಿದ್ಯಾರ್ಥಿನಿಯೊರ್ವಳು ಶೌಚಾಲಯಕ್ಕೆ(toilet) ಹೋಗಿದ್ದಾಗ ಆ ಮೂರು ಯುವತಿಯರು ಕದ್ದು ವಿಡಿಯೋ(Video) ಮಾಡಿಬಿಟ್ಟಿದ್ರು. ವಿಡಿಯೋ ಮಾಡಿದವರು ಮುಸ್ಲಿಂ ವಿದ್ಯಾರ್ಥಿನಿಯರಾದ್ರೆ(Muslim students) ಶೌಚಾಲಾಯದಲ್ಲಿದ್ದಿದ್ದು ಹಿಂದೂ. ಇದೇ ಕಾರಣಕ್ಕೆ ಆ ಘಟನೆ ಇವತ್ತು ಭಾರಿ ಸದ್ದು ಮಾಡ್ತಿರೋದು. ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿರೋದು. ಯಾವಾಗ ರಶ್ಮಿಯವರು ಎರಡು ಪೋಸ್ಟ್ ಹಾಕಿದ್ರೋ ಇಡೀ ರಾಜ್ಯವೇ ಶೇಕ್ ಆಗಿಬಿಡ್ತು. ಅಲ್ಲಿವರೆಗೆ ಸೈಲೆಂಟಾಗಿದ್ದ ಉಡುಪಿ ವೈಲೆಂಟ್ ಆಯ್ತು. ರಾಜಕಾರಣಿಗಳು ಹೇಳಿಕೆಗಳನ್ನ ಕೊಡೋದಕ್ಕೆ ಶುರು ಮಾಡಿದ್ರು. ಒನ್ಸ್ ಅಗೈನ್ ಬಿಜೆಪಿ ಹಿಂದೂಗಳ ಮೇಲಿನ ಪಿತೂರಿ ಅಂದ್ರೆ ನಮ್ಮ ರಾಜ್ಯದ ಗೃಹ ಸಚಿವರು ಇದು ಸಣ್ಣ ಘಟನೆ ಅಂದುಬಿಟ್ಟರು. ಯಾವಾಗ ರಶ್ಮಿ ಟ್ವೀಟ್ ವೈರಲ್ ಆಯ್ತೋ ವಿಡಿಯೋ ಸುದ್ದಿ ರಾಜ್ಯದಲ್ಲೆಲ್ಲಾ ಸದ್ದು ಮಾಡ್ತು. ಅಲ್ಲಿವರೆಗೆ ತಣ್ಣಗಿದ್ದ ಪ್ರಕರಣ ಸೆನ್ಸೇಷನ್ ಕ್ರಿಯೇಟ್ ಮಾಡೋದಕ್ಕೆ ಆರಂಭವಾಯ್ತು.

ಇದನ್ನೂ ವೀಕ್ಷಿಸಿ:  4 ದಿಕ್ಕುಗಳಿಂದ 4 ಅಟ್ಯಾಕ್..ಸಿಎಂ ಸಿದ್ದು.. ಡಿಸಿಎಂ ಡಿಕೆಗೆ ಹೊಸ ಟೆನ್ಷನ್..!

Video Top Stories