ಬೆಂಗಳೂರಲ್ಲಿ ಬೈಕ್ ಬ್ಯಾಟರಿ ಕಳ್ಳರ ಹಾವಳಿ: ರಾಯಲ್ ಎನ್ ಫೀಲ್ಡ್ ಬೈಕ್‌ಗಳೇ ಟಾರ್ಗೆಟ್ !
ಬೆಂಗಳೂರಿನಲ್ಲಿ ಬೈಕ್ ಕಳ್ಳರ ಹಾವಳಿ ಮಿತಿ ಮೀರ್ತಿದೆ. ಇನ್ನೊಂದೆಡೆ ಬೈಕ್‌ನ ಬ್ಯಾಟರಿ ಕದಿಯೋರ ಸಂಖ್ಯೆಯೂ ಹೆಚ್ಚಾಗ್ತಿದೆ. ರಾಯಲ್ ಎನ್ ಫೀಲ್ಡ್ ಬೈಕ್ ಬ್ಯಾಟರಿಗಳನ್ನೇ ಟಾರ್ಗೆಟ್ ಮಾಡ್ತಿದ್ದ ಆಸಾಮಿ ನೂರಾರು ಬೈಕ್‌ಗಳ ಬ್ಯಾಟರಿಗಳನ್ನೇ ಎಗರಿಸಿದ್ದಾನೆ.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೈಕ್ ಹಾಗೂ ಸೈಕಲ್ ಕಳ್ಳರ ಹಾವಳಿ ಹೆಚ್ಚಾಗ್ತಿದೆ. ಆದ್ರೆ ಇಲ್ಲೊಬ್ಬ ಖತರ್ನಾಕ್ ಕಳ್ಳ(Thife) ಬೈಕ್‌ಗಳ ಬ್ಯಾಟರಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ(Theft) ಮಾಡ್ತಿದ್ದಾನೆ. ರಾತ್ರಿ ವೇಳೆ ಬೈಕ್‌ನಲ್ಲಿ ಬಂದು ಕ್ಷಣ ಮಾತ್ರದಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್‌ಗಳ(Royal Enfield bikes) ಬ್ಯಾಟರಿ ಕದ್ದು ಎಸ್ಕೇಪ್ ಆಗ್ತಿದ್ದಾನೆ. ದಿನದಿಂದ ದಿನಕ್ಕೆ ರಾತ್ರಿ ವೇಳೆ ಬೈಕ್ ಬ್ಯಾಟರಿ ಕಳ್ಳತನ ಪ್ರಕರಣಗಳು ಹೆಚ್ಚಾಗ್ತಿವೆ. ಈ ಸಂಬಂಧ ಪೊಲೀಸರಿಗೆ ಸಾಲು, ಸಾಲು ದೂರುಗಳು ಬರ್ತಿವೆ. ಓಕಳಿಪುರಂನ ನಿವಾಸಿಗಳಾಗಿರೋ ಅಫೀಸ್ ಹಾಗೂ ರವಿ ಹಲವು ವರ್ಷಗಳಿಂದ ವಾಸವಾಗಿದ್ದಾರೆ. ಅವರ ರಾಯಲ್ ಎನ್ ಫೀಲ್ಡ್ ಬೈಕ್ ನ ಬ್ಯಾಟರಿ ಕದ್ದು ಖತರ್ನಾಕ್ ಎಸ್ಕೇಪ್ ಆಗಿದ್ದಾನೆ. ಈ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು ರವಿ ಎಂಬುವವರು ಮಿಲ್ಕ್ ಬ್ಯುಸಿನೆಸ್ ಮಾಡಿಕೊಂಡ ಎನ್ ಫೀಲ್ಡ್ ಬೈಕ್ ಖರೀದಿ ಮಾಡಿದ್ರು. ಮನೆ ಮುಂದೆ ನಿಲ್ಲಿಸಿದ ಬೈಕ್ ಬ್ಯಾಟರಿ ಕದ್ದಿದ್ದಾನೆ. ರಾತ್ರಿ ವೇಳೆ ಪೊಲೀಸರು ಬಿಟ್ ಬರ್ತಾರೇ. ಆದ್ರೆ ಪೊಲೀಸ್ ಬಿಟ್ ಮುಗಿಸಿ ಹೋದ ಮೇಲೆ ಬಂದು ಬ್ಯಾಟರಿ ಕದಿದ್ದಾರೆ.
ಇದನ್ನೂ ವೀಕ್ಷಿಸಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಜೋಡಿ: 12 ವರ್ಷದ ಪ್ರೀತಿಗೆ ವಿವಾಹ ಮುದ್ರೆ !