Asianet Suvarna News Asianet Suvarna News

ಮೂರು ಹೆಣ ಹಾಕಿ ಕಾಶಿಗೆ ಹೋಗಿ ತಲೆ ಬೋಳಿಸಿದ್ದ: ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅಮ್ಮ-ಮಕ್ಕಳ ಭೀಕರ ಕೊಲೆ!

ಅದೊಂದು ಚಿಕ್ಕ ಸಂಸಾರ.. ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು.. ಗಂಡ ದುಬೈನಲ್ಲಿ ದುಡಿಮೆ ಮಾಡ್ತಿದ್ರೆ ಹೆಂಡತಿ ಮಕ್ಕಳನ್ನ ನೋಡಿಕೊಂಡು ಇಲ್ಲೇ ಇದ್ದುಬಿಟ್ಟಿದ್ಲು... ವರ್ಷಕ್ಕೆ ಎರಡು ವರ್ಷಕ್ಕೊಮ್ಮೆ ಹೆಂಡತಿಯನ್ನ ನೋಡೋಕೆ ಭಾರತಕ್ಕೆ ಬರ್ತಿದ್ದ ಗಂಡ ಮೊನ್ನೆ ತಾನೇ ಮನೆಗೆ ಬಂದಿದ್ದ.

ಅದೊಂದು ಚಿಕ್ಕ ಸಂಸಾರ.. ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು.. ಗಂಡ ದುಬೈನಲ್ಲಿ ದುಡಿಮೆ ಮಾಡ್ತಿದ್ರೆ ಹೆಂಡತಿ ಮಕ್ಕಳನ್ನ ನೋಡಿಕೊಂಡು ಇಲ್ಲೇ ಇದ್ದುಬಿಟ್ಟಿದ್ಲು... ವರ್ಷಕ್ಕೆ ಎರಡು ವರ್ಷಕ್ಕೊಮ್ಮೆ ಹೆಂಡತಿಯನ್ನ ನೋಡೋಕೆ ಭಾರತಕ್ಕೆ ಬರ್ತಿದ್ದ ಗಂಡ ಮೊನ್ನೆ ತಾನೇ ಮನೆಗೆ ಬಂದಿದ್ದ.. ಎರಡು ದಿನ ಇದ್ದು ವಾಪಸ್ ಹೋಗಿದ್ದ.. ಆದ್ರೆ ಗಂಡ ದುಬೈಗೆ ವಾಪಸ್ ಆಗಿ ಮಾರನೇ ದಿನವೇ ಹೆಂಡತಿ ಮತ್ತು ಇಬ್ಬರು ಮಕ್ಕಳು ಕೊಲೆಯಾಗಿ ಹೋಗಿದ್ರು.. ಆದ್ರೆ ಇದೇ ಕೇಸ್ನ ತನಿಖೆ ನಡೆಸಿದ್ದ ಪೊಲೀಸರಿಗೆ ಕೊಲೆಗಾರ ಯಾರು ಅನ್ನೋದು ಈಸಿಯಾಗಿ ಗೊತ್ತಾಗಿತ್ತು.. ಆದ್ರೆ ಅವನು ಎಲ್ಲಿದ್ದಾನೆ ಅನ್ನೋದು ಮಾತ್ರ ಗೊತ್ತಿರಲಿಲ್ಲ.. ಹಾಗಾದ್ರೆ ಮೂರು ಹೆಣ ಹಾಕಿ ನಾಪತ್ತೆಯಾಗಿದ್ದವನು ತಗ್ಲಾಕಿಕೊಂಡಿದ್ದೇಗೆ..? ಆತ ಅಷ್ಟುಭೀಕರವಾಗಿ ಕೊಲೆಮಾಡಿದ್ದಾದ್ರೂ ಯಾಕೆ ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್. 

ಕೇಸ್ ದಾಖಲಿಸಿಕೊಂಡು ತನಿಖೆ ಆರಂಬಿಸಿದ ಪೊಲೀಸರು ಕುಮಾರಗೌಡನನ್ನ ಎಲ್ಲಾ ಕಡೆ ಹುಡುಕಾಡಿದ್ರು. ಬಟ್ ಆತ ಮಾತ್ರ ಎಲ್ಲಿಯೂ ಸಿಗಲೇ ಇಲ್ಲ.. ಆದ್ರೆ ಆತ ಮಾತ್ರ ರಾಜ್ಯವನ್ನೇ ಬಿಟ್ಟು ಹೋಗಿದ್ದ.. ಮಾಡಿದ ತಪ್ಪಿಗೆ ಪಶ್ಚಾತಾಪವಾಗಿ ಆತ ತಲೆ ಬೋಳಿಸಿಕೊಂಡು ಕಾಶಿಯಾತ್ರೆಗೆ ಹೋಗಿದ್ದ.. ಆದ್ರೆ ಮಾಡಿದ ಪಾಪ ಬಿಡಬೇಕಲ್ಲ.. ಹೇಗೆ ಆತ ಮೂರು ಹೆಣಗಳನ್ನ ಹಾಕಿ ಎಸ್ಕೇಪ್ ಆದನೋ ಹಾಗೇ ತನ್ನ ಗ್ರಾಮಕ್ಕೆ ವಾಪಸ್ ಆಗಿದ್ದ. ಒಂದು ವಾರದ ಬಳಿಕ ಕುಮಾರ ಪೊಲೀಸರೆದುರು ಶರಣಾಗಿದ್ದ.. ಆದ್ರೆ ತಾಯಿಯಂತಿದ್ದ ಅತ್ತಿಗೆಯನ್ನ ಆತ ಕೊಂದಿದ್ದೇಕೆ..? ಏನೂ ತಿಳಿಯದ ಆ ಪುಟ್ಟ ಮಕ್ಕಳನ್ನ ಈ ಪಾಪಿ ಮುಗಿಸಿದ್ದೇಕೆ..? 

ಅಂಥಹ ತಪ್ಪು ಅವರು ಮಾಡಿದ್ದೇನೆ..? ಅಷ್ಟಕ್ಕೂ ಆವತ್ತು ಘಟನೆ ನಡೆದ ದಿನ ಆ ಮನೆಯಲ್ಲಿ ನಡೆದಿದ್ದೇನು..? ಕುಮಾರ ಗೌಡ ಮತ್ತು ಹೊನ್ನೆಗೌಡ ಅಣ್ಣ ತಮ್ಮಂದಿರು... ಅಣ್ಣ ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡ್ತಿದ್ರಿಂದ ಅವನ ವ್ಯವಹಾರವನ್ನೆಲ್ಲಾ ತಮ್ಮ ಕುಮಾರನೇ ನೋಡಿಕೊಳ್ತಿದ್ದ. ಕಾಂಪ್ಲೆಕ್ಸ್, ಅಂಗಡಿಗಳ ವ್ಯವಹಾರವನ್ನೆಲ್ಲಾ ನೋಡಿಕೊಳ್ತಿದ್ದ.. ಹೀಗೆ ಅಣ್ಣನ ವ್ಯವಹಾರವನ್ನ ನೋಡಿಕೊಳ್ತಿದ್ದ ಕುಮಾರ ಒಂದಷ್ಟು ಹಣವನ್ನ ದುರುಪಯೋಗ ಮಾಡಿಬಿಟ್ಟಿದ್ದ.. ಇದೇ ವಿಷಯವನ್ನ ಗೀತ ಗಂಡ ಹೊನ್ನೆಗೌಡನಿಗೆ ಹೇಳಿದ್ಲು. ಯಾವಾಗ ತಮ್ಮ ಹೀಗೆ ಮಾಡ್ತಿದ್ದಾನೆ ಅನ್ನೋದು ಗೊತ್ತಾಯ್ತೋ ಮೊನ್ನೆ ವಾಪಸ್ ದುಬೈನಿಂದ ಬಂದ ಮೇಲೆ ವ್ಯವಹಾರಗಳನ್ನೆಲ್ಲಾ ತಮ್ಮನಿಂದ ಕಿತ್ತು ಹೆಂಡತಿಗೆ ಕೊಟ್ಟ. 

ಇದು ಕುಮಾರನ ಪಿತ್ತಾ ನೆತ್ತಿಗೇರುವಂತೆ ಮಾಡ್ತು. ಅತ್ತಿಗೆ ನನ್ನ ವಿರುದ್ಧವೇ ಮಾತನ್ನಾಡಿಬಿಟ್ಟಳಲ್ಲ ಅಂತ ಯೋಚಿಸಿ ಅವಳನ್ನೇ ಕೊಲ್ಲೋದಕ್ಕೆ ನಿರ್ಧರಿಸಿಬಿಟ್ಟ.. ರಾತ್ರಿ ಮಲಗಿದ್ದ ವೇಳೆ ಮಚ್ಚು ಬೀಸೇ ಬಿಟ್ಟ. ತನಗೆ ಬರ್ತಿದ್ದ ಹಣದ ಮೂಲವನ್ನ ಅತ್ತಿಗೆ ತಪ್ಪಿಸಿದ್ಲೂ ಅನ್ನೋ ಒಂದೇ ಕಾರಣಕ್ಕೆ ಕುಮಾರ ಮೂರು ಹೆಣಗಳನ್ನ ಬೀಳಿಸಿದ್ದಾನೆ. ನಂತರ ಪಶ್ಚಾತಾಪ ಅಂತ ತಲೆ ಬೋಳಿಸಿ ಕಾಶಿಗೂ ಹೋಗಿಬಂದಿದ್ದಾನೆ.. ಆದ್ರೆ ಈ ಪರಮ ಪಾಪಿಯನ್ನ ಆ ದೇವರು ಕೂಡ ಕ್ಷಮಿಸಲ್ಲ.. ಈತನಿಗೆ ಏನ್ ಶಿಕ್ಷೆ ಕೊಟ್ಟರೂ ಕಡಿಮೆನೇ.

Video Top Stories