Nightmare For Locals: ಕೋಲಾರದ ಬೆಟ್ಟದಲ್ಲಿ ಪುಂಡರ ಕಾಟ,  ಪ್ರೇಮಿಗಳಿಗೂ ದುಸ್ವಪ್ನ!

* ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಶತಶೃಂಗ ಪರ್ವತ
* ಪ್ರವಾಸಿಗರಿಗೆ, ಪ್ರೇಮಿಗಳನ್ನು ಆಕರ್ಷಿಸುವ ಸುಂದರವಾದ ಬೆಟ್ಟ
* ಬೆಟ್ಟದಲ್ಲಿ ಪೋಲಿ ಯುವಕರ ಕಾಟ ಹೆಚ್ಚಾಗಿದ್ದು ಸ್ಥಳೀಯರಿಗೆ ತೊಂದರೆ
* ಎಲ್ಲೆಂದರಲ್ಲಿ ಕುಡಿದು ಖಾಲಿ ಬಾಟಲ್‌ಗಳನ್ನು ಎಸೆಯುವ ಪೋಲಿಗಳು

First Published Dec 17, 2021, 8:31 PM IST | Last Updated Dec 17, 2021, 8:31 PM IST

ಕೋಲಾರ(ಡಿ. 17) ನಿರಂತರ ಮಳೆ ಸುರಿದ ಪರಿಣಾಮ ಈ ಬೆಟ್ಟ ಇದೀಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ..ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಸೆಳೆಯುತ್ತಿದೆ..ಆದರೆ ಬಂದ ಪ್ರವಾಸಿಗರು ಹಿಡಿಶಾಪ ಹಾಕ್ತಿದ್ದು, ಮತ್ತೆ ಬರೋದಕ್ಕೆ ಭಯ ಪಡ್ತಿದ್ದಾರೆ. ಹೌದು ಪೋಲಿ-ಪುಂಡರ ಉಪಟಳದಿಂದ ಇಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಶತಶೃಂಗ ಬೆಟ್ಟ ಪ್ರವಾಸಿಗರಿಗೆ ಹಾಗೂ ಪ್ರೇಮಿಗಳ ನೆಚ್ಚಿನ ಕೇಂದ್ರವಾಗಿ ಪರಿಣಮಿಸಿದೆ. ನೋಡಲು ಸುಂದರವಾದ ಬೆಟ್ಟ, ಬೆಟ್ಟದ ಮೇಲಿನ ಪ್ರಕೃತಿ ಸೌಂದರ್ಯದ ರಮಣೀಯ ದೃಶ್ಯವನ್ನು ಈಗ ಪ್ರೇಮಿಗಳು, ಪ್ರವಾಸಿಗರು ನೆಮ್ಮದಿಯಿಂದ ಎಂಜಾಯ್‌ ಮಾಡುವ ಹಾಗಿಲ್ಲ.

Drive Against Drug Menace: ಹೊಸ ವರ್ಷಕ್ಕೂ ಮುನ್ನ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸ್ ಸಮರ

ಕೋಲಾರ (Kolar)  ನಗರಕ್ಕೆ ಹೊಂದಿಕೊಂಡಿರುವ ಅಂತರಗಂಗೆ ಬೆಟ್ಟ ಹಾಗೂ ಶತಶೃಂಗ ಪರ್ವತ ಇತ್ತೀಚೆಗೆ ಪ್ರವಾಸಿಗರಿಗೆ (Tourist) ಹಾಗೂ ಪ್ರೇಮಿಗಳ ನೆಚ್ಚಿನ ಕೇಂದ್ರವಾಗಿದೆ. ಪ್ರತಿನಿತ್ಯ ಬೆಟ್ಟಕ್ಕೆ ನೂರಾರು  ಜನ ಆಗಮಿಸುತ್ತಾರೆ.  ಬೆಟ್ಟದಲ್ಲಿ ಪೋಲಿ ಯುವಕರ ಕಾಟ ಹೆಚ್ಚಾಗಿದೆ. ಮದ್ಯ ಸೇವನೆ (Liquor), ಗಾಂಜಾ (Drugs) ಸೇವನೆಗೆ ತಡೆ ಇಲ್ಲ.  ಬೈಕ್ ವೀಲಿಂಗ್ ಮಾಡುವುದು ಕಂಡುಬರುತ್ತಿದ್ದು ಇದಕ್ಕೆಲ್ಲ ಬ್ರೇಕ್ ಹಾಕಬೇಕು ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.