Asianet Suvarna News Asianet Suvarna News

ಯುವತಿಗೆ ವಂಚಿಸಿ ಫೈಜಲ್ ಅರೆಸ್ಟ್; SDPI ಮುಖಂಡರು ಹೇಳೋದಿದು

Oct 7, 2020, 2:42 PM IST

ಬೆಂಗಳೂರು (ಅ. 07): ಪುತ್ತೂರು ತಾಲೂಕಿನ SDPI ಮುಖಂಡ ಅಬ್ದುಲ್ ಹಮೀದ್ ಸಾಲ್ವ ಪುತ್ರ ಫೈಜಲ್ ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪದಡಿ ಬಂಧಿಸಲಾಗಿದೆ. ಇನ್ಸ್ಟಾಗ್ರಾಮ್‌ನಲ್ಲಿ ಫೈಜಲ್‌ಗೆ ಆಂಧ್ರ ಮೂಲದ ಹುಡುಗಿಯೊಬ್ಬಳು ಪರಿಚಯವಾಗುತ್ತಾಳೆ. ಮದುವೆಯಾಗುವಂತೆ ಗಂಟು ಬೀಳುತ್ತಾನೆ. ಪ್ರೀತಿ, ಪ್ರೇಮ ಎಂದೆಲ್ಲಾ ನಂಬಿಸಿ ಲೈಂಗಿಕ ಕಿರುಕುಳವನ್ನೂ ಕೊಟ್ಟು, ಕೊನೆಗೆ ಕೈ ಕೊಡುತ್ತಾನೆ. ಈ ಆರೋಪದಡಿ ಫೈಜಲ್‌ನನ್ನು ಬಂಧಿಸಲಾಗಿದೆ. 

ಪ್ರೀತಿ, ಪ್ರೇಮವೆಂದು ನಂಬಿಸಿ ಯುವತಿಗೆ ಲೈಂಗಿಕ ಕಿರುಕುಳ; SDPI ಮುಖಂಡನ ಮಗ ಅರೆಸ್ಟ್!

 

ಈ ಪ್ರಕರಣದ ಬಗ್ಗೆ SDPI ಮುಖಂಡ ರಿಯಾಜ್ ಫರಂಗಿಪೇಟೆ ಪ್ರತಿಕ್ರಿಯಿಸಿದ್ಧಾರೆ. 'ಅಬ್ದುಲ್ ಹಮೀದ್‌ ಅವರು ಮಗನ ಪರವಾಗಿ ನಿಂತಿಲ್ಲ. ಮಗನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಕಾನೂನಿನ ಪ್ರಕಾರ ಶಿಕ್ಷೆಯಾಗಲಿ ಎಂದಿದ್ದಾರೆ. ಇದರಲ್ಲಿ ಅವರ ಯಾವ ತಪ್ಪೂ ಇಲ್ಲ' ಎಂದು ಸಮರ್ಥನೆ ನೀಡಿದ್ದಾರೆ. 

Video Top Stories