Asianet Suvarna News Asianet Suvarna News

ಅರೆಸ್ಟ್‌ ಆಗುವ ಮುನ್ನ ಸಂಜನಾ ಹೈಡ್ರಾಮಾ; ಚರ್ಚೆಯೇ ಯೂಸ್‌ಲೆಸ್‌ ಎಂದಿದ್ರು ಡ್ರಾಮಾಕ್ವೀನ್

ಅರೆಸ್ಟ್‌ಗೂ ಮುನ್ನ ಸಂಜನಾ ಹೆಸರು ಕೇಳಿ ಬಂದಾಗ ಮಾಧ್ಯಮಗಳು ಪ್ರಶ್ನಿಸಿದಾಗ, 'ನನಗೆ ಪ್ರಶಾಂತ್ ಸಂಬರಗಿ ಯಾರು ಅಂತಲೇ ಗೊತ್ತಿಲ್ಲ. ವೀರೆನ್ ಖನ್ನಾ ಯಾರು ಅಂತಲೇ ಗೊತ್ತಿಲ್ಲ. ನನ್ನನ್ಯಾಕೆ ಪ್ರಶ್ನಿಸುತ್ತಿದ್ದೀರಿ? ನನ್ನನ್ನು ಪ್ರಶ್ನಿಸಲು ನೀವ್ಯಾರು ಪೊಲೀಸ್ ಅಲ್ಲ, ಅವರು ವಿಚಾರಣೆಗೆ ಕರೆದರೆ ಉತ್ತರಿಸುತ್ತೇನೆ' ಎಂದು ಡ್ರಾಮಾ ಮಾಡಿದ್ದರು.

ಬೆಂಗಳೂರು (ಅ. 03): ಡ್ರಗ್ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಡ್ರಾಮಾ ಮಾಡುತ್ತಿದ್ದ ಸಂಜನಾ ಗರ್ಲಾನಿ ಬಗ್ಗೆ ವಿಚಾರಣೆ ವೇಳೆ ಒಂದೊಂದೇ ವಿಚಾರಗಳು ಹೊರ ಬರುತ್ತಿವೆ. ಸೆ. 04 ಕ್ಕೆ ರಾಗಿಣಿ ದ್ವಿವೇದಿ ಅರೆಸ್ಟ್ ಆಗುತ್ತಿದ್ದಂತೆ ತಾನೂ ಕೂಡಾ ಅರೆಸ್ಟ್ ಆಗುತ್ತೇನೆ ಎಂದು ಸಂಜನಾಗೆ ತಿಳಿದಿತ್ತು. ಹಾಗಾಗಿ ಡ್ರಗ್ ಕೇಸ್‌ನಲ್ಲಿ ಎಫ್‌ಐಆರ್ ಆದರೆ ಏನಾಗುತ್ತೆ? ಯಾವ ರೀತಿ ಸಿಸಿಬಿ ವಿಚಾರಣೆ ನಡೆಯುತ್ತೆ? ಎಂಬುದರ ಬಗ್ಗೆ ಲಾಯರ್‌ಗಳಿಗೆ ಕರೆ ಮಾಡಿ ಮಾಹಿತಿ ಕಲೆ ಹಾಕಿದ್ದರು. ಗೂಗಲ್ ಕೂಡಾ ಮಾಡಿದ್ದರು.

ರಾಗಿಣಿ ಅಲರ್ಟ್‌ ಆಗ್ತಿದ್ದಂತೆ ಸಂಜನಾ ಅಲರ್ಟ್; ಸಿಸಿಬಿ ಮುಂದೆ ನಡೀಲಿಲ್ಲ ಬಚಾವ್ ಪ್ಲಾನ್!