Asianet Suvarna News Asianet Suvarna News

ಹುಟ್ಟುಹಬ್ಬ ಆಯೋಜಿಸುತ್ತಿದ್ದ ಫೈವ್‌ ಸ್ಟಾರ್‌ ಹೋಟೆಲ್‌ಗಳಿಂದಲೇ ಸಿಗ್ತಿತ್ತು ಕಮಿಷನ್!

ಡ್ರಗ್ಸ್ ಕೇಸ್‌ ಮತ್ತೊಮ್ಮೆ ಸ್ಯಾಂಡಲ್‌ವುಡ್‌ ನಟಿಯರಿಗೆ ಉರುಳಾಗುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಈಗಾಗಲೇ ಜಾಮೀನು ಪಡೆದು ಹೊರ ಬಂದಿರುವ ನಟಿಯರು ಮಾದಕ ದ್ರವ್ಯ ಸೇವಿಸಿರುವುದು ಟೆಸ್ಟ್‌ನಲ್ಲಿ ಸಾಬೀತಾಗಿದೆ. ಹೀಗಿರುವಾಗ ನಟಿಯರು ಕೊಟ್ಟಿರುವ ತಪ್ಪೊಪ್ಪಿಗೆ ಲಭ್ಯವಾಗಿದ್ದು, ತಾವು ಈ ಜಾಲದಲ್ಲಿ ಹೇಗೆ ಸಿಕ್ಕಾಕೊಡೆವು, ಬಳಿಕ ನಡೆದಿದ್ದೇನು ಎಂಬಿತ್ಯಾದಿ ಸ್ಫೋಟಕ ವಿಚಾರಗಳನ್ನು ಬಯಲುಪಡಿಸಿದ್ದಾರೆ.

ಬೆಂಗಳೂರು(ಆ.25): ಡ್ರಗ್ಸ್ ಕೇಸ್‌ ಮತ್ತೊಮ್ಮೆ ಸ್ಯಾಂಡಲ್‌ವುಡ್‌ ನಟಿಯರಿಗೆ ಉರುಳಾಗುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಈಗಾಗಲೇ ಜಾಮೀನು ಪಡೆದು ಹೊರ ಬಂದಿರುವ ನಟಿಯರು ಮಾದಕ ದ್ರವ್ಯ ಸೇವಿಸಿರುವುದು ಟೆಸ್ಟ್‌ನಲ್ಲಿ ಸಾಬೀತಾಗಿದೆ. ಹೀಗಿರುವಾಗ ನಟಿಯರು ಕೊಟ್ಟಿರುವ ತಪ್ಪೊಪ್ಪಿಗೆ ಲಭ್ಯವಾಗಿದ್ದು, ತಾವು ಈ ಜಾಲದಲ್ಲಿ ಹೇಗೆ ಸಿಕ್ಕಾಕೊಡೆವು, ಬಳಿಕ ನಡೆದಿದ್ದೇನು ಎಂಬಿತ್ಯಾದಿ ಸ್ಫೋಟಕ ವಿಚಾರಗಳನ್ನು ಬಯಲುಪಡಿಸಿದ್ದಾರೆ.

ಹೌದು ಸದ್ಯ ಸಂಜನಾ ಗಲ್ರಾನಿ ಕೊಟ್ಟಿರುವ ತಪ್ಪೊಪ್ಪಿಗೆ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಇದರಲ್ಲಿ ಅವರು ಅನೇಕ ಶಾಕಿಂಗ್ ವಿಚಾರಗಳನ್ನು ಬಯಲುಪಡಿಸಿದ್ದಾರೆ. ಇಲ್ಲಿ ಸ್ಟಾರ್‌ ಹೋಟೆಲ್‌ಗಳಲ್ಲಿ ಹುಟ್ಟುಹಬ್ಬದ ನೆಪದಲ್ಲಿ ಮಾಡುತ್ತಿದ್ದ ಪಾರ್ಟಿಗಳ ಬಗ್ಗೆಯೂ ಬಾಯ್ಬಿಟ್ಟಿದ್ದಾರೆ. ಅಲ್ಲದೇ ರಾಗಿಣಿ ಕೂಡಾ ತಮ್ಮ ತಪ್ಪೊಪ್ಪಿಗೆಯಲ್ಲಿ ಹುಟ್ಟುಹಬ್ಬದ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಹೋಟೆಲ್‌ಗಳು ತಮಗೇ ಕಮಿಷನ್ ನೀಡುತ್ತಿದ್ದವೆಂಬ ವಿಚಾರ ಬಾಯ್ಬಿಟ್ಟಿದ್ದಾರೆ.