Asianet Suvarna News Asianet Suvarna News

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಖ್ಯಾತ ನಟಿಯ ಸಹೋದರನ ಮೇಲೆ FIR

ಇದು ಸ್ಯಾಂಡಲ್‌ವುಡ್ ಕುಟುಂಬಕ್ಕೆ ಸಂಬಂಧಿಸಿದ ಸ್ಟೋರಿ.ಸ್ಯಾಂಡಲ್‌ವುಡ್ ನಟಿಯ ಸಹೋದರ ಕೀರ್ತಿಚಂದ್ರ ಎಂಬುವವರು ನನ್ನ ತಂಗಿ ಫೇಮಸ್ ನಟಿ ಎಂದು ಹೇಳಿ, ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆ ಇದೆ ಎಂದು ನಂಬಿಸಿ ಮಹಿಳೆಗೆ ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. 

First Published Mar 16, 2022, 3:04 PM IST | Last Updated Mar 16, 2022, 3:04 PM IST

ಬೆಂಗಳೂರು (ಮಾ. 16): ಇದು ಸ್ಯಾಂಡಲ್‌ವುಡ್ ಕುಟುಂಬಕ್ಕೆ ಸಂಬಂಧಿಸಿದ ಸ್ಟೋರಿ. ಸ್ಯಾಂಡಲ್‌ವುಡ್ ನಟಿಯ ಸಹೋದರ ಕೀರ್ತಿಚಂದ್ರ ಎಂಬುವವರು ನನ್ನ ತಂಗಿ ಫೇಮಸ್ ನಟಿ ಎಂದು ಹೇಳಿ, ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆ ಇದೆ ಎಂದು ನಂಬಿಸಿ ಮಹಿಳೆಗೆ ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಜೊತೆಗೆ ಅತ್ಯಾಚಾರದ ಆರೋಪವನ್ನೂ ಮಾಡಿದ್ದಾರೆ ಸಂತ್ರಸ್ತೆ. 

2021 ರಲ್ಲಿ ಸಂತ್ರಸ್ತೆಗೆ ಆರೋಪಿ ಕೀರ್ತಿಚಂದ್ರನ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ಬೆಳೆದು, ಮದುವೆಯಾಗುವುದಾಗಿ ಕೀರ್ತಿಚಂದ್ರ ನಂಬಿಸಿದ್ದರು. ದೈಹಿಕ ಸಂಪರ್ಕವನ್ನೂ ಬೆಳೆಸಿದ್ದರು. ಆದರೆ ಕೊನೆಗೆ ಮದುವೆಯಾಗದೇ ಮೋಸ ಮಾಡಿದ್ದಾರೆ ಎಂದು ಬಸವನಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ.