Asianet Suvarna News Asianet Suvarna News

ಬಾಲಿವುಡ್‌ನಲ್ಲಿ ರೇವ್ ಪಾರ್ಟಿ ಬಿರುಗಾಳಿ, 600ಕ್ಕೂ ಹೆಚ್ಚು ವಿಐಪಿ ಭಾಗಿ!

ಬಾಲಿವುಡ್‌ನಲ್ಲಿ ಡ್ರಗ್ಸ್ ಪಾರ್ಟಿ ವಿಚಾರ ಸದ್ಯ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಆಘಾತಕಾರಿ ಮಾಹಿತಿ ಬೆಳಕಿಗೆ ಬರಲಾರಂಭಿಸಿವೆ. ಸಮುದ್ರದ ಮಧ್ಯೆ ಹಡಗಿನಲ್ಲಿ ನಡೆಯುತ್ತಿದ್ದ ಈ ಪಾರ್ಟಿಯಲ್ಲಿ 600ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, ಬಹುತೇಕ ಎಲ್ಲರೂ ದೆಹಲಿಯಿಂದ ಆಗಮಿಸಿದ್ದ ವಿಐಪಿಗಳೆನ್ನಲಾಗಿದೆ. 

ಮುಂಬೈ(ಅ.03): ಬಾಲಿವುಡ್‌ನಲ್ಲಿ ಡ್ರಗ್ಸ್ ಪಾರ್ಟಿ ವಿಚಾರ ಸದ್ಯ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಆಘಾತಕಾರಿ ಮಾಹಿತಿ ಬೆಳಕಿಗೆ ಬರಲಾರಂಭಿಸಿವೆ. ಸಮುದ್ರದ ಮಧ್ಯೆ ಹಡಗಿನಲ್ಲಿ ನಡೆಯುತ್ತಿದ್ದ ಈ ಪಾರ್ಟಿಯಲ್ಲಿ 600ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, ಬಹುತೇಕ ಎಲ್ಲರೂ ದೆಹಲಿಯಿಂದ ಆಗಮಿಸಿದ್ದ ವಿಐಪಿಗಳೆನ್ನಲಾಗಿದೆ. 

ಹೌದು ರೇವ್‌ ಪಾರ್ಟಿಯಲ್ಲಿ ಭಾಗವಹಿಸಿದ್ವರು ಉದ್ಯಮಿಗಳು, ವಿದೆಶಿ ನಟರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೆನ್ನಲಾಗಿದೆ. ಇನ್ನು ಈ ಪಾರ್ಟಿಯಲ್ಲಿ ಭಾಗವಹಿಸಲು 60 ಸಾವಿರದಿಂದ 5 ಲಕ್ಷ ರೂಪಾಯಿವರೆಗೆ ಎಂಟ್ರಿ ಫೀಸ್‌ ವಿಧಿಸಲಾಗಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಇಷ್ಟೇ ಅಲ್ಲದೇ ಈ ಡ್ರಗ್ಸ್ ಪಾರ್ಟಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.