'ರವಿಶಂಕರ್ ಜೊತೆ ಲಿವಿಂಗ್ ಟುಗೆದರ್‌ನಲ್ಲಿ ಇದ್ದೀರಾ'? ಸಿಸಿಬಿ ಪ್ರಶ್ನೆಗೆ ರಾಗಿಣಿ ಹೇಳಿದ್ದೇನು?
ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಸುಳಿಯಲ್ಲಿ ಸಿಲುಕಿಕೊಂಡಿದ್ಧಾರೆ. ಸಿಸಿಬಿ ಅಧಿಕಾರಿಗಳು ಡ್ರಿಲ್ ಮಾಡುತ್ತಿದ್ದಾರೆ. 'ನಿಮಗೂ ರವಿಶಂಕರ್‌ಗೂ ಏನ್ ಸಂಬಂಧ? ಹೇಗೆ ಸಂಬಂಧ? ಡ್ರಗ್ ಲಿಂಕ್ ಇದ್ರೆ ಯಾರನ್ನೆಲ್ಲಾ ಸಂಪರ್ಕ ಮಾಡಿದ್ದೀರಾ? ಸಂಜನಾ ಸ್ನೇಹಿತ ರಾಹುಲ್ ನಿಮಗೆ ಪರಿಚಯ ಇದಾನಾ'? ಎಂದು ಪ್ರಶ್ನಿಸಿದ್ಧಾರೆ.
ಬೆಂಗಳೂರು (ಸೆ. 04): ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಸುಳಿಯಲ್ಲಿ ಸಿಲುಕಿಕೊಂಡಿದ್ಧಾರೆ. ಸಿಸಿಬಿ ಅಧಿಕಾರಿಗಳು ಡ್ರಿಲ್ ಮಾಡುತ್ತಿದ್ದಾರೆ. 'ನಿಮಗೂ ರವಿಶಂಕರ್‌ಗೂ ಏನ್ ಸಂಬಂಧ? ಹೇಗೆ ಸಂಬಂಧ? ಡ್ರಗ್ ಲಿಂಕ್ ಇದ್ರೆ ಯಾರನ್ನೆಲ್ಲಾ ಸಂಪರ್ಕ ಮಾಡಿದ್ದೀರಾ? ಸಂಜನಾ ಸ್ನೇಹಿತ ರಾಹುಲ್ ನಿಮಗೆ ಪರಿಚಯ ಇದಾನಾ? ಎಂದು ಪ್ರಶ್ನಿಸಿದ್ಧಾರೆ.
ಸಿಸಿಬಿ ಪಾಟೀ ಸವಾಲುಗಳನ್ನು ಹಾಕಿದೆ. ಮೊದ ಮೊದಲು ನನಗೂ ಡ್ರಗ್ಸ್‌ಗೂ ಸಂಬಂಧ ಇಲ್ಲ ಎಂದರೂ ಕೊನೆಗೆ ಸಾಕ್ಷಿ ಮುಂದಿಟ್ಟಾಗ ನಿಧಾನಕ್ಕೆ ಹೌದು ಎನ್ನುವ ರೀತಿ ಉತ್ತರಿಸ ತೊಡಗಿದರು. ಸಿಸಿಬಿ ಅಧಿಕಾರಿಗಳನ್ನು ತಪ್ಪಿಸಿಕೊಳ್ಳಲು ಫೋನ್ ಬದಲಾಯಿಸಿದ್ದರು. ವಾಟ್ಸಾಪನ್ನು ಡಿಲೀಟ್ ಮಾಡಿದ್ದರು. ಆದರೆ ಸಿಸಿಬಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಲವಾದ ಸಾಕ್ಷ್ಯಾಧಾರಗಳಿವೆ. ಹಾಗಾದರೆ ರಾಗಿಣಿ ಅರೆಸ್ಟ್ ಆಗುತ್ತಾರಾ? ಕಾದು ನೋಡಬೇಕಾಗಿದೆ.
'ಅವನ್ಯಾರ್ರಿ ಪ್ರಶಾಂತ್ ಸಂಬರಗಿ? ಬೀದಿ ನಾಯಿಗೆ ಕೊಡುವ ಗೌರವವನ್ನೂ ಅವರಿಗೆ ಕೊಡಲ್ಲ'