ಡ್ರಗ್ ಪೆಡ್ಲರ್ ಪ್ರಶಾಂತ್ ರಾಂಕಾ ಸಿಸಿಬಿ ವಶಕ್ಕೆ ; ಇನ್ನಷ್ಟು ಸ್ಫೋಟಕ ಮಾಹಿತಿ ಹೊರಕ್ಕೆ?

ಡ್ರಗ್ ಮಾಫಿಯಾ ಬಗ್ಗೆ ಸಿಸಿಬಿಯಿಂದ ಸಾಕಷ್ಟು ತನಿಖೆಯಾಗುತ್ತಿದೆ. ಈ ಪ್ರಕರಣದಲ್ಲಿ ಪ್ರಶಾಂತ್ ರಾಂಕಾ ಎನ್ನುವವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. 

First Published Sep 10, 2020, 4:56 PM IST | Last Updated Sep 10, 2020, 4:56 PM IST

ಬೆಂಗಳೂರು (ಸೆ. 10): ಡ್ರಗ್ ಮಾಫಿಯಾ ಬಗ್ಗೆ ಸಿಸಿಬಿಯಿಂದ ಸಾಕಷ್ಟು ತನಿಖೆಯಾಗುತ್ತಿದೆ. ಈ ಪ್ರಕರಣದಲ್ಲಿ ಪ್ರಶಾಂತ್ ರಾಂಕಾ ಎನ್ನುವವನನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ವಿಚಾರಣೆ ನಡೆಸುತ್ತಿದ್ದೇವೆ. ಇನ್ನೂ ಐವರು ಆರೋಪಿಗಳ ಕಸ್ಟಡಿ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆ' ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾಧ್ಯಮದೆದುರು ಹೇಳಿದ್ದಾರೆ. 

ಡ್ರಗ್ ಮಾಫಿಯಾ: ರಾಗಿಣಿ, ಸಂಜನಾಗೆ ಡೋಪಿಂಗ್ ಟೆಸ್ಟ್ ಸಂಕಷ್ಟ..!

ಈ ಕೇಸ್‌ಗೆ ಈಗ ಇಡಿ ಎಂಟ್ರಿಯಾಗಿದ್ದು, ಶ್ರೀಲಂಕಾದ ಕ್ಯಾಸಿನೋಗಳಲ್ಲಿ ಅಕ್ರಮ ಹಣ ವರ್ಗಾವಣೆಯಾಗಿರುವ ಬಗ್ಗೆ ವಿಚಾರಣೆ ನಡೆಸುತ್ತಿದೆ. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಸಂದೀಪ್ ಪಾಟೀಲ್ ಯಾವುದೇ ಉತ್ತರ ನೀಡದೇ ಹೋದರು. ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!