ಮುರುಘಾ ಶ್ರೀಗಳ ಕೇಸ್: ಪೋಷಕರಿಗೆ ಹಣ ಕೊಟ್ಟು ಪ್ರಕರಣ ಮುಚ್ಚಿ ಹಾಕಲು ಯತ್ನ?
ಮುರುಘಾ ಶ್ರೀ ವಿರುದ್ಧ ಎರಡೆರಡು ಪೋಕ್ಸೋ ಕೇಸ್ ಹಾಕಲಾಗಿದ್ದು, ಪೋಷಕರಿಗೆ ಹಣ ಕೊಟ್ಟು ಪ್ರಕರಣ ಮುಚ್ಚಿ ಹಾಕಲು ಯತ್ನಿಸಲಾಗಿದೆಯಾ ಎಂಬ ಶಂಕೆ ಉಂಟಾಗಿದೆ.
ಚಿತ್ರದುರ್ಗ(ನ.19):ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಲಾಗಿದ್ದು, ಶ್ರೀಗಳ ವಿರುದ್ಧ ದೂರು ನೀಡದಂತೆ ಬಾಲಕಿಯರಿಗೆ ಒತ್ತಡ ಹಾಕಿದ್ರಾ ಎಂಬ ಅನುಮಾನ ವ್ಯಕ್ತವಾಗಿದೆ. ವಿದ್ಯಾರ್ಥಿನಿಯರ ಪೋಷಕರಿಗೆ ಹಣದ ಆಮಿಷ ನೀಡಿದ್ರಾ ಶ್ರೀಗಳು..? ಹಣ ಪಡೆದು ಮಕ್ಕಳನ್ನು ವಾಪಸ್ ಬನ್ನಿ ಅಂದ್ರಾ ಹೆತ್ತವರು..? ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದೆ. ‘ಸ್ವಾಮಿಗಳು ನಮ್ಮನ್ನು ನೋಡಿಕೊಳ್ತಿದ್ದಾರೆ, ಹಣ ಕೊಟ್ಟಿದ್ದಾರೆ, ಕೇಸು ಮುಂದುವರಿಸುವುದು ಬೇಡ ವಾಪಸ್ ಬಾ’ ಎಂದಿದ್ದಾರೆ ಎನ್ನಲಾಗಿದೆ. ಸಂತ್ರಸ್ತ ಬಾಲಕಿಯರಿಗೆ ಪೋಷಕರಿಂದಲೇ ಅನ್ಯಾಯವಾಗ್ತಿದೆಯಾ ಎಂದು ಹೇಳಲಾಗುತ್ತಿದೆ.
ಬ್ಯಾಂಕ್‌ನಲ್ಲೇ ₹ 53 ಕೋಟಿ ಇದ್ದರೂ ದೇಗುಲ ಅಭಿವೃದ್ಧಿಗೆ ಬಳಸುವಂತಿಲ್ಲ!