Asianet Suvarna News Asianet Suvarna News

ಮುರುಘಾ ಶ್ರೀ ಪ್ರಕರಣ ಮುಚ್ಚಿ ಹಾಕಲು ಹುನ್ನಾರ: ಒಡನಾಡಿ ಸಂಸ್ಥೆಗೆ ಆ 'ಸಚಿವ'ನ ಡೀಲ್

Murugha Shree POCSO Case: ಚಿತ್ರದುರ್ಗ ಮುರುಘಾ ಶ್ರೀಗಳ ಪ್ರಕರಣವನ್ನು ಮುಚ್ಚಿಹಾಕಲು ಹುನ್ನಾರ ನಡೆದಿದ್ದು, ಕೇಸ್‌ ಮುಚ್ಚಿಹಾಕಲು ಒಡನಾಡಿ ಸಂಸ್ಥೆಗೆ ಆಮಿಷ ಒಡ್ಡಲಾಗಿದೆ.

ಮುರುಘಾ ಶ್ರೀಗಳ ಪ್ರಕರಣ ವಿಚಾರವಾಗಿ ಒಡನಾಡಿ ಸಂಸ್ಥೆ ಬಾಯಿ ಮುಚ್ಚಿಸಲು ಸಚಿವರೊಬ್ಬರು ಡೀಲ್ ನಡೆಸಿರುವ ಮಾಹಿತಿ ಬಹಿರಂಗವಾಗಿದೆ. ಈ ಕುರಿತು ಒಡನಾಡಿ ಸಂಸ್ಥೆಯ ನಿರ್ದೇಶಕ ಪರಶುರಾಮ್‌ ಹೇಳಿಕೆ ನೀಡಿದ್ದು, ಯಾವ ಮಂತ್ರಿಗೂ ಬಗ್ಗಲ್ಲ ಜಗ್ಗಲ್ಲ ಎಂದಿದ್ದಾರೆ. ಎಲ್ಲಾ ರೀತಿಯ ಕಾನೂನು ಹೋರಾಟಕ್ಕೆ ಸಿದ್ಧವಿದ್ದು, FIR ಬಳಿಕ ಶ್ರೀಗಳ ಹೆಸರು ಬಳಸದಂತೆ ಹೇಳಿದರು. ಪ್ರಾಣ ಕೊಟ್ಟಾದ್ರೂ ಮಕ್ಕಳ ಹಿತ ಕಾಯ್ದು ಕೊಳ್ಳುತ್ತೇವೆ ಎಂದರು. ಮಂತ್ರಿ ಹೆಸರು ಹೇಳಿ ನಮ್ಮ ಬಳಿ ವ್ಯಕ್ತಿ ಬಂದಿದ್ದರು. ಒಡನಾಡಿ ಕಟ್ಟಡಕ್ಕೆ 3 ಕೋಟಿ ರೂ. ಆಮಿಷವನ್ನು ಮಂತ್ರಿ ಬೆಂಬಲಿಗ ಒಡ್ಡಿದ್ದ. ಚಾರಿಟಿ ಮಾತ್ರ ಬೆಳಸಿ ಉಳಿದದ್ದು ಬೇಡ ಎಂದು ಒಡನಾಡಿಗೆ ಧಮ್ಕಿ ಹಾಕಿದ್ದರು ಎಂದು ತಿಳಿಸಿದ್ದಾರೆ.

ಪ್ರಧಾನಿ ಅವಹೇಳನ ವಿಚಾರ: ಶಾಸಕ ಪಿಟಿ ಪರಮೇಶ್ವರ ಬಂಧಿಸುವಂತೆ ಆಗ್ರಹ

Video Top Stories