Suvarna FIR: ಮಗನನ್ನೇ ಕೊಂದಳಾ ಪಾಪಿ ತಾಯಿ, ಅಮ್ಮಾ ಬಿಟ್ಟು ಬಿಡು ಎಂದರೂ ಬಿಡದ ರಾಕ್ಷಸಿ

ಜಗತ್ತಿನಲ್ಲಿ ಕೆಟ್ಟ ಮಗನಿರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತಿದೆ. ಆದರೆ ಇಲ್ಲೊಂದು ಅಪವಾದವಿದೆ. ವಿಜಯಪುರದಲ್ಲಿ (Vijayapura) ತಾಯಿಯೊಬ್ಬಳು ಮಗನನ್ನು ಕೊಂದಿದ್ದಾಳೆ. 

First Published Dec 18, 2021, 5:25 PM IST | Last Updated Dec 18, 2021, 5:25 PM IST

ವಿಜಯಪುರ (ಡಿ. 18): ಜಗತ್ತಿನಲ್ಲಿ ಕೆಟ್ಟ ಮಗನಿರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತಿದೆ. ಆದರೆ ಇಲ್ಲೊಂದು ಅಪವಾದವಿದೆ. ವಿಜಯಪುರದಲ್ಲಿ ತಾಯಿಯೊಬ್ಬಳು ಮಗನನ್ನು ಕೊಂದಿದ್ದಾಳೆ. ಹೆಸರು ವಿನೋದ ಸವಿತಾ ಚೌಹಾಣ್.

ಕಳೆದ 6 ತಿಂಗಳ ಹಿಂದೆ ವಿನೋದ ಚೌಹೌಣ್ ಎಂಬಾತನನ್ನು ಮದುವೆಯಾಗುತ್ತಾಳೆ.  ಮದುವೆಯಾಗಿ ಮನೆಗೆ ಬಂದ ಈಕೆ, ಮೊದಲ ಹೆಂಡತಿಯ ಮಗನನ್ನು ಮೊಬೈಲ್‌ ಚಾರ್ಜರ್‌ನಿಂದ ಸಾಯಿಸಿದ್ಧಾಳೆ. ಇನ್ನೊಂದು ಮಗುವಿನ ಹತ್ಯೆಗೆ ಯತ್ನಿಸಿದ್ದಾಳೆ. ಅದೃಷ್ಟವಶಾತ್ ಆ ಮಗು ಬಚಾವಾಗಿದೆ. ಅಷ್ಟಕ್ಕೂ ಈ ಮಕ್ಕಳ ಮೇಲೆ ತಾಯಿಗೇಕೆ ಸಿಟ್ಟು..?