Asianet Suvarna News Asianet Suvarna News

ಹಣ, ಹೆಸರು, ದುರುಳರ ಸಹವಾಸವೇ ದರ್ಶನ್‌ರನ್ನ ಬದಲಾಯಿಸಿಬಿಟ್ಟಿತ್ತಾ?: ಹಳೇ ವಿಡಿಯೋಗಳು ಮತ್ತೆ ವೈರಲ್

ಅದು 2011 ನಟಿ ನಿಖಿತಾ ಜೊತೆ ಅಫೇರ್ ಇಟ್ಟುಕೊಂಡಿದ್ದ ದರ್ಶನ್ ಪತ್ನಿಗೆ ಟಾರ್ಚರ್ ಕೊಟ್ಟುಬಿಟ್ಟಿದ್ದರು. ಪತ್ನಿ ವಿಜಯಲಕ್ಷ್ಮೀ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು.  ಅದಾದ ನಂತರವೂ ಹಲವು ಬಾರಿ ಪತ್ನಿಯನ್ನು ಹಿಂಸಿಸಿದ್ದರು.

ಅದು ಮಂಡ್ಯ ಚುನಾವಣಾ ಪ್ರಚಾರ.. ಸುಮಲತಾ ಪರ ದರ್ಶನ್ ಪ್ರಚಾರದಲ್ಲಿ ಭಾಗಿಯಾಗಿದ್ರು. ಆದ್ರೆ ದರ್ಶನ್ ಅಲ್ಲಿ ಮಾಡಿದ ಪದಬಳಕೆ ಮಾತ್ರ ಇವತ್ತಿಗೂ ಜನ ಮತ್ತೆ ಕೇಳುವಂತೆ ಮಾಡುತ್ತೆ. ದರ್ಶನ್ ಕೊಲೆ ಕೇಸ್ಮೇಲೆ ಒಳಗೆ ಹೋದ ಮೇಲೆ ದರ್ಶನ್ ಹೇಳಿದ್ದು ಅಕ್ಷರಷಃ ನಿಜ ಅಂತ  ಅಂದುಕೊಳ್ತಿದ್ದಾರೆ. ಅದು 2011 ನಟಿ ನಿಖಿತಾ ಜೊತೆ ಅಫೇರ್ ಇಟ್ಟುಕೊಂಡಿದ್ದ ದರ್ಶನ್ ಪತ್ನಿಗೆ ಟಾರ್ಚರ್ ಕೊಟ್ಟುಬಿಟ್ಟಿದ್ದರು. ಪತ್ನಿ ವಿಜಯಲಕ್ಷ್ಮೀ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು.  ಅದಾದ ನಂತರವೂ ಹಲವು ಬಾರಿ ಪತ್ನಿಯನ್ನು ಹಿಂಸಿಸಿದ್ದರು. ಪತ್ನಿ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ಸಪರೇಟ್ ವಾಸಿಸೋಕೆ ಶುರುಮಾಡಿದ್ದರು. ಅಲ್ಲಿಗೂ ಹೋಗಿ ಹೊಡೆಯಲು ನೋಡಿದ್ದರು.  ಅಪಾರ್ಟ್ಮೆಂಟ್ ಒಳಗೆ ಬಿಡದೆ ಇದ್ದದ್ದಕ್ಕೆ ಸೆಕ್ಯೂರಿಟಿಗೂ ಹೊಡೆದಿದ್ದರು. ಆ ಸಮಯದಲ್ಲಿ ಪತ್ನಿಗೆ ಕೀಳು ಮಟ್ಟದಲ್ಲಿ ಬೈದು ಆಡಿಯೋವಂದನ್ನ ಕಳಿಸಿದ್ದರು. 

ವಿಜಯಲಕ್ಷ್ಮಿ ಪೋಲೀಸರಿಗೆ ಆ ಆಡಿಯೋ ಕಳಿಸಿ ಕಂಪ್ಲೈಂಟ್ ರಿಜಿಸ್ಟರ್ ಮಾಡಿದ್ದರು. ಪೋಲಿಸರು ಆಡಿಯೋ ಲೀಕ್ ಮಾಡಿದ್ದರು. ಆಡಿಯೋ ಕೇಳಿದರೆ.. ಒಂದು ಕ್ಷಣ ಶಾಕ್ ಆಗುತ್ತೆ. ಅಂತ ಕೆಟ್ಟ ಬೈಗುಳಗಳದು. ವೀಡಿಯೋ ನೋಡಿದ್ಮೇಲೆ ಜನ ಹೇಳಿದ್ದು ನೀನು ಲ್ಯಾಂಬೋರ್ಗಿನಿ ತಗೋಬಹುದು. ಆದ್ರೆ ಅವರ ಗುಣ , ವ್ಯಕ್ತಿತ್ವ ಮಾತ್ರ ಎಷ್ಟು ಕೋಟಿ ಕೊಟ್ರೂ ನಿನಗೆ ಬರೊಲ್ಲ ಎಂದಿದ್ರು.  ನಿರ್ಮಾಪಕರನ್ನ ಅಣ್ಣಾವ್ರು ಅನ್ನದಾತರು ಅಂತಾರು, ನಮ್ ಯಜಮಾನರು ಅಂತಾರೆ. ಅದೇ ದರ್ಶನ್ ರಾಬರ್ಟ್ ನಿರ್ಮಾಪಕರಿಗೆ ಹೇ ತಗಡು ಅನ್ನುತ್ತಾರೆ. ನಿರ್ಮಾಪಕರನ್ನಷ್ಟೆ ಅಲ್ಲ, ದರ್ಶನ್ ನಿರ್ದೇಸಕರನ್ನು ಬಿಡೋಲ್ಲ. ದರ್ಶನ್ಗೆ ಕರಿಯದಂತಹ ಬಿಗ್ ಹಿಟ್ ಸಿನಿಮಾಕೊಟ್ಟ ನಿರ್ದೇಶಕ ಜೋಗಿ ಪ್ರೇಮ್ಗೆ ಅವನೇನು ಮಹಾ.. ದೊಡ್ಡ ಪುಡಾಂಗ್ ಡೈರೆಕ್ಟರಾ ಎಂದು ಪ್ರಶ್ನೆ ಮಾಡಿದ್ದು ಮಾತ್ರ ದರ್ಶನ್ ತನ್ನ ನಿರ್ದೇಸಕರಿಗೆ ಎಷ್ಟು ಮರ್ಯಾದೆ ಕೊಡ್ತಾರೆ ಅನ್ನೋದಕ್ಕೆ ಸಾಕ್ಷಿ. 

ಹೆಣ್ಣು ಮಕ್ಕಳಿಗೆ ದರ್ಶನ್ ಬಹಳ ಮರ್ಯಾದೆ ಕೊಡ್ತಾರೆ ಅನ್ನೋ ಮಾತಿತ್ತು.   ಆದ್ರೆ ನಿರ್ಮಾಪಕ ಉಮಾಪತಿ ಹೇಳೋ ಹಾಗೆ ದರ್ಶನ್ಗೆ ರತಿಯಂತ ಹೆಂಡತಿಯಿದ್ದರು ಕೋತಿಯಂತ ಗೆಳತಿಹಿಂದೆ ಬಿದ್ದಿದ್ರು.  ಪತ್ನಿ ವಿಜಯಲಕ್ಷ್ಮಿಯನ್ನಷ್ಟೆ ಅಲ್ಲ, ಗೆಳತಿ ಪವಿತ್ರಾ ಗೌಡಾಗೂ ಹಲವು ಬಾರಿ ದರ್ಶನ್ ಹೊಡೆದಿದ್ದಾರಂತೆ. ರೇಣುಕಾಸ್ವಾಮಿ ಕೊಲೆಯ ನಂತರವೂ ಪವಿತ್ರಾಗೆ ದರ್ಶನ್ ಹೊಡೆದಿದ್ದರಂತೆ.  ದರ್ಶನ್ಗೆ ಪತ್ನಿ ಗೆಳತಿ ಮೇಲೆ ಎಷ್ಟು ಪ್ರೀತಿ ಗೌರವ ಇತ್ತು ಅನ್ನೋದಕ್ಕೆ ಈ ಒಂದು ವೀಡಿಯೋ ಸಾಕ್ಷಿ. ಹೆಣ್ಣು ಮಕ್ಕಳಷ್ಟೆ ಅಲ್ಲ ದರ್ಶನ್ಗೆ ದೇವತೆಗೂ ಮರ್ಯಾದೆ ಕೊಡೋದು ಗೊತ್ತಿಲ್ವಾ ಅಂತ ಜನ ಒಮ್ಮೆಗೆ ಬೆಚ್ಚಿಬಿದ್ದಿದ್ದು ದರ್ಶನ್ ಅದೃಷ್ಟ ದೇವತೆಗೆ ಬಟ್ಟೆ ಬಿಚ್ಚೋ ಮಾತಾಡಿದಾಗ. ಇಷ್ಟೆಲ್ಲಾ ಮಾತಾಡೊ ದರ್ಶನ್ ತನ್ನ ಅಭಿಮಾನಿಗಳಿಗೆ ತಲೇ ಹಿಡಿಬೇಡಿ ತಲೇ ಹೋಡಿ ಬೇಡಿ ಅಂತಾ ಪಾಟ ಮಾಡ್ತಾರೆ. 

ಆದ್ರೆ ದರ್ಶನ್ ಮಾಡಿದ್ದು ಅದನ್ನೆ ಅಲ್ವಾ ಅಂತ ಅಭಿಮಾನಿಗಳು ಕೇಳ್ತಿದ್ದಾರೆ. ಮೈಸೂರಿನಲ್ಲಿ ಕುಡಿದ ಅಮಲಲ್ಲಿ ಕಾರ್ ಓಡಿಸಿ ಡಿವೈಡರ್ಗೆ ಹೊಡೆದು ಆಸ್ಪತ್ರೆ ಸೇರಿದ್ದ ದರ್ಶನ್ ಮಾಧ್ಯಮದ ಜೊತೆ ಹೇಗೆ ವರ್ತಿಸಿದ್ದರು ನೋಡಿ. ಒಂದಲ್ಲಾ ಎರಡಲ್ಲ.. ದರ್ಶನ್ ತಾನಾಗೆ ತಾನು ಮೈಮೇಲೆ ಎಳಕೊಂಡ ಪ್ರಕರಣಗಳು ನೂರಾರು ಸಿಗುತ್ತವೆ. ಕೊನೆಗೆ ಉಳಿಯೊಂದೊಂದೆ ಪ್ರಶ್ನೆ ದರ್ಶನ್ ಯಾಕಿಂಗೆ ಅಂತ.. ಎಸ್ಎಸ್ ಎಲ್ಸಿ ಓದಿದ್ರೂ ತಾನೊಬ್ಬ ಸಾರ್ವಜನಿಕ ವ್ಯಕ್ತಿಯಾಗಿ ಗುರ್ತಿಸಿಕೊಂಡಿದ್ರೂ ಎಲ್ಲ ಹೇಗೆ ಮಾತಾಡಬೇಕು ಅನ್ನೋದು ಗೊತ್ತಿಲ್ಲದೆ ಹೋಯ್ತೆ..? ಅನ್ನಿಸುತ್ತೆ. ತಾನು ಮಾಡಿದ್ದು ತಾನೇ ಅನುಭವಿಸಬೇಕು. ಕರ್ಮ ರಿಟರ್ನ್ಸ್ ಅಂತ ದರ್ಶನ್ ಕೂಡ ಹೇಳಿದ್ದು ಇದೇ ಅನ್ನಿಸುತ್ತೆ.

Video Top Stories