5 ವರ್ಷದ ಪ್ರೀತಿ ತಾತನಿಗೆ ಸಾಕೆನಿಸಿತ್ತು..! ಅವನಿಗಾಗಿ ಮಕ್ಕಳು.. ಮೊಮ್ಮಕ್ಕಳನ್ನೇ ಬಿಟ್ಟಳು ಅಜ್ಜಿ..!
ಮದುವೆಯಾಗ್ತೀನಿ ಅಂತ ಅವನು ಮೋಸ ಮಾಡಿಬಿಟ್ಟನಾ..?
ಮಗನಿಗೆ ಹುಡುಗಿ ಹುಡುಕು ಅಂದವನು ಮನೆಗೆ ಕರೆದಿದ್ದ..!
ಬ್ರೇಕ್ ಅಪ್ ಅಂದವನ ವಿರುದ್ಧ ಠಾಣೆ ಮೆಟ್ಟಿಲು ಹತ್ತಿದ್ಲು..!
ಅದು ಅಪರೂಪದಲ್ಲೇ ಅಪರೂಪದ ಲವ್ ಸ್ಟೋರಿ.. 63ರ ಅಜ್ಜಿಗೂ.. 70ರ ತಾತನಿಗೂ ಅಲ್ಲಿ ಪ್ರೇಮಾಂಕುರವಾಗಿತ್ತು. ಪ್ರೀತಿಗೆ ಕಣ್ಣಿಲ್ಲ.. ಜಾತಿ ಇಲ್ಲ ಅಂತಾರೆ.. ಆದ್ರೆ ವಯಸ್ಸನ್ನೂ ಮೀರಿ ಆದ ಪ್ರೀತಿ ಇದು. ಸೀನಿಯರ್ ಸಿಟಿಜನ್ಗಳ ನಡುವೆ ಆದ ಪ್ರೀತಿ 5 ವರ್ಷಗಳ ಕಾಲ ಚೆನ್ನಾಗೇ ಇತ್ತು. ಆದ್ರೆ ಇವತ್ತು 5 ವರ್ಷದ ಪ್ರೀತಿಗೆ(Love) ಎಳ್ಳು ನೀರು ಬಿಟ್ಟಿದ್ದಾನೆ ಲವ್ವರ್ ಬಾಯ್. ಪ್ರೀತಿಸಿದ ಅಜ್ಜ ಕೈಕೊಟ್ಟ ಅಂತ ಇವತ್ತು ಅಜ್ಜಿ ಪೊಲೀಸ್ (Police) ಮೆಟ್ಟಿಲ್ಲೇರಿದ್ದಾಳೆ. ಅಷ್ಟೇ ಅಲ್ಲ ನನಗೆ ನ್ಯಾಯ ಬೇಕು.. ನನ್ನ ಲವ್ವರ್ ನನಗೆ ವಾಪಸ್ ಬೇಕು ಅಂತ ಗೋಳಾಡ್ತಿದ್ದಾಳೆ. ತನ್ನ ಪ್ರೀಯಕರನನ್ನ ನಂಬಿ ಇವತ್ತು ಅಕ್ಷರಶಃ ಬೀದಿಗೆ ಬಂದಿದ್ದಾಳೆ. ಜೇನುಗೂಡಿನಂತಿದ್ದ ಕುಟುಂಬದಿಂದ ದೂರ ಆಗಿದ್ದಾಳೆ. ಮಕ್ಕಳು ಮೊಮ್ಮಕ್ಕಳು ಈಕೆಯನ್ನ ಮನೆಯಿಂದ ಹೊರಗೆ ಹಾಕಿದ್ದಾರೆ. ಹೀಗೆ ಎಲ್ಲರಿಂದ ದೂರ ಆದವಳು ಇವತ್ತು ನ್ಯಾಯ ಬೇಕು ಅಂತ ಪೊಲೀಸ್ ಠಾಣೆ ಮೆಟ್ಟಿಲ್ಲೇರಿದ್ದಾಳೆ. ಇನ್ನೂ ಈಕೆ ತನ್ನ ಲವ್‌ಸ್ಟೋರಿ ಮತ್ತು ಪ್ರೀಯಕರ ತನಗೆ ಹೇಗೆಲ್ಲಾ ಮೋಸ ಮಾಡಿದ್ದಾನೆ ಅನ್ನೋದನ್ನ ವಿವರವಾಗಿ ಹೇಳಿದ್ದಾಳೆ. ಅವನನ್ನ ಸಂಪೂರ್ಣವಾಗಿ ನಂಬಿದ್ದ ಈಕೆ ಆತ ಕರೆದ ಕಡೆಯಲ್ಲಾ ಹೋಗಿದ್ದಾಳೆ. ದೇವಸ್ಥಾನ ಅಂತ ಕರೆದುಕೊಂಡು ಮಾಡಬಾರದನ್ನ ಮಾಡಿದ್ದಾನೆ. ಮದುವೆಯಾಗ್ತೀನಿ ಅಂತ ನಂಬಿಸಿ ಈಗ ನನಗೂ ಅವಳಿಗೂ ಏನೂ ಸಂಬಂಧ ಇಲ್ಲ ಅಂತಿದ್ದಾನೆ. ಅಷ್ಟೇ ಅಲ್ಲ ಆಕೆ ತನ್ನ ಜೊತೆಗೆ ಬಂದಿದ್ದಕ್ಕೆ ನಾನು ಹಣ ಕೊಟ್ಟಿದ್ದೇನೆ ಅಂತ ನೀಚವಾಗಿ ಮಾತನ್ನಾಡಿದ್ದಾನೆ.
ಇದನ್ನೂ ವೀಕ್ಷಿಸಿ: ವಿರೋಧದ ಮಧ್ಯೆನೂ ಘರ್ ವಾಪ್ಸಿ ಮಾಡ್ತಿದ್ದಾರಾ ಡಿಕೆಶಿ ? ರಾಜೀನಾಮೆ ಮಾತುಗಳಾಡಿದ್ದೇಕೆ ತನ್ವೀರ್ ಸೇಠ್..?