Asianet Suvarna News Asianet Suvarna News

Sniffer Dog Tunga: ರೇಪ್ & ಮರ್ಡರ್ ಕೇಸ್ ಬೇಧಿಸಿದ ಲೇಡಿ ಸಿಂಗಂ: ಚಾರ್ಲಿ ಸಿನಿಮಾದ ಚಾರ್ಲಿಯನ್ನೇ ಮೀರಿಸುತ್ತಾಳೆ ತುಂಗಾ!

Karnataka Police Sniffer Dog Tunga: ಚಾರ್ಲಿ 777ನಲ್ಲಿ ಚಾರ್ಲಿಯ ಬುದ್ಧಿವಂತಿಕೆಯನ್ನ ಮೆಚ್ಚಿದ್ದ ಜನ ಇವತ್ತು ನಮ್ಮ ಎಫ್ಐಆರ್‌ನಲ್ಲಿ ಬರೋ ಚಾರ್ಲಿಯ ಡಿಟೆಕ್ಟೀವ್ ಬ್ರೇನನ್ನು ನೋಡಿ ದಂಗಾಗ್ತಾರೆ

ಬೆಂಗಳೂರು (ಜೂ. 28):  ಚಾರ್ಲಿ 777, ಈ ಸಿನಿಮಾವನ್ನ ನೋಡಿದವರಿಗೆ ಇವತ್ತಿನ ಎಪಿಸೋಡ್ ಖಂಡಿತ ಇಷ್ಟವಾಗುತ್ತೆ. ಯಾಕಂದ್ರೆ ಅಲ್ಲಿ ಚಾರ್ಲಿಯ ಬುದ್ಧಿವಂತಿಕೆಯನ್ನ ಮೆಚ್ಚಿದ್ದ ಜನ ಇವತ್ತು ನಮ್ಮ ಎಫ್ಐಆರ್‌ನಲ್ಲಿ ಬರೋ ಚಾರ್ಲಿಯ ಡಿಟೆಕ್ಟೀವ್ ಬ್ರೇನನ್ನು ನೋಡಿ ದಂಗಾಗ್ತಾರೆ. ಇವಳು ಅಖಾಡಕ್ಕೆ ಇಳಿದ್ರೆ ಅದೆಂಥದ್ದೇ ಕ್ರೈಮ್ ಕೇಸ್ ಆದ್ರೂ ಸಾಲ್ವ್ ಮಾಡದೇ ಬಿಡೋದಿಲ್ಲ. ಪೊಲೀಸ್ ಡಿಪಾರ್ಟ್ಮೆಂಟಿನಲ್ಲಿ ಇವಳನ್ನ ಲೇಡಿ ಸಿಂಗಂ ಅಂಥಲೇ ಕರೀತಾರೆ. ಇನ್ನೂ ಈ ಲೇಡಿ ಸಿಂಗಂ ಮೊನ್ನೆ ತಾನೆ ಒಂದು ಕೇಸ್ ಬೇಧಿಸಿದ್ದಾಳೆ. ಮಹಿಳೆಯೊಬ್ಬಳನ್ನ ರೇಪ್ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದ ಹಂತಕನನ್ನ ತನ್ನ ಮನೆಗೇ ಹೋಗಿ ಹಿಡಿದು ಹಾಕಿದೆ ನಮ್ಮ ಚಾರ್ಲಿ. ಇನ್ನೂ ಈಕೆಯ ಹಿನ್ನಲೆ ಕೇಳಿಬಿಟ್ರೆ ನೀವೇ ಒಂದು ಕ್ಷಣ ದಂಗಾಗ್ತೀರ. ಹೀಗೆ ಕರ್ನಾಟಕ ಪೊಲೀಸ್ನಲ್ಲಿ ಲೇಡಿ ಸಿಂಗಂ ಅಂತಲೇ ಫೇಮಸ್ ಆಗಿರುವ ಶ್ವಾನದ ಕಥೆಯೇ ಇವತ್ತಿನ ಎಫ್ಐಆರ್

ಇದನ್ನೂ ನೋಡಿ: ಒಂದಿಂಚು ಕದಲದೇ ಥಿಯೇಟರ್‌ನಲ್ಲಿ ಚಾರ್ಲಿ ವೀಕ್ಷಿಸಿದ ಶ್ವಾನ

Video Top Stories