ಪ್ರೀತಿಸಿದ ತಪ್ಪಿಗೆ ಯುವಪ್ರೇಮಿ ದುರಂತ ಅಂತ್ಯ, ವಿಷ ಕುಡಿದು ಆತ್ಮಹತ್ಯೆ

ಪ್ರೀತಿ ಮಾಡಿದ ಹುಡುಗಿ ಜತೆ ಪರಾರಿಯಾಗಿದ್ದ ಗಂಗಾಧರ್‌ನನ್ನ ಪತ್ತೆ ಮಾಡಿ ಯುವತಿ ಮನೆಯವರು ಥಳಿಸಿದ್ದರು. ಈ ವಿಡಿಯೋ ವೈರಲ್‌ ಆಗುವ ಭೀತಿಯಿಂದ ಈಗ ವಿಷ ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

First Published Jun 3, 2022, 3:56 PM IST | Last Updated Jun 3, 2022, 3:55 PM IST

ಬಳ್ಳಾರಿ (ಜೂನ್ 3): ಅಪ್ರಾಪ್ತ ಹುಡುಗಿಯನ್ನು (Minor Girl) ಪ್ರೀತಿಸಿದ್ದಲ್ಲದೆ, ಅವಳ ಜೊತೆ ಪರಾರಿಯಾಗಿದ್ದ ಕಾರಣಕ್ಕೆ ಯುವ ಪ್ರೇಮಿಯೊಬ್ಬನನ್ನು ಯುವತಿಯ ಮನೆಯವರು ಹಿಗ್ಗಾ ಮುಗ್ಗಾ ಥಳಿಸಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಇದರಿಂದ ಮನನೊಂದಿದ್ದ ಯುವಕ ವಿಷ (poison) ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪೋಷಕರು ವಿರೋಧ ವ್ಯಕ್ತಪಡಿಸಿದ್ದರೂ, ಗಂಗಾಧರ್ ಅಪ್ರಾಪ್ತ ಯುವತಿಯೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದ. ಇವರನ್ನು ಹುಡುಕುವಲ್ಲಿ ಯುವತಿಯ ಮನೆಯವರು ಯಶಸ್ವಿಯಾಗಿದ್ದರು. ಕೊನೆಗೆ ಇಬ್ಬರನ್ನೂ ತಮ್ಮ ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿದ್ದರು. ಇದರ ನಡುವೆ ಹುಡುಗನನ್ನು ಥಳಿಸಿದ ವಿಡಿಯೋವನ್ನೂ ಮಾಡಿದ್ದರು. ಇದರಿಂದ ಮನನೊಂದ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

Ballari; ಆಪ್ತಾಪ್ತೆಯನ್ನು ಪ್ರೀತಿಸಿದ ಯುವಕನ ದುರಂತ ಅಂತ್ಯ!

ತೋರಣಗಲ್ ಪೋಲಿಸ್ ಠಾಣೆ (toranagal Police stattion) ವ್ಯಾಪ್ತಿಯ ಆಪ್ರಾಪ್ತ ಬಾಲಕಿ ಮತ್ತು ಸಂಡೂರು ತಾಲೂಕಿನ ತಿಮ್ಮಲಾಪುರ ಗ್ರಾಮದ ಗಂಗಾಧರ ಕಳೆದ ಕೆಲ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಈ ವಿಷಯ ಮನೆಯಲ್ಲಿ ಗೊತ್ತಾಗಿ ಇಬ್ಬರನ್ನು ಬೇರೆ ಬೇರೆ ಇರುವಂತೆ ವಾರ್ನಿಂಗ್ ಮಾಡಿರುತ್ತಾರೆ. ಆದ್ರೇ, ಇನ್ನೇನು ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲು ಆಗೋದಿಲ್ಲ ಅನ್ನೋ ಸ್ಥಿತಿಗೆ ಬಂದಾಗ ಇಬ್ಬರು ಮನೆಬಿಟ್ಟು ಓಡಿ ಹೋಗ್ತಾರೆ. ಆಗ ಯುವತಿಯ ಪೋಷಕರು ತೋರಣಗಲ್ ಠಾಣೆಯಲ್ಲಿ ಕಿಡ್ನಾಪ್ ಯುವತಿ ಪ್ರಕಣವನ್ನು ದಾಖಲು ಮಾಡಿದ್ದರು.