Asianet Suvarna News Asianet Suvarna News

ಡ್ರಗ್ಸ್ ಸೇವಿಸೋದನ್ನ ಪತ್ನಿ ಕೈಲಿ ವಿಡಿಯೋ ಮಾಡಿಸಿದ ಪತಿ; ಸಹಕರಿಸು ಎಂದು ಪತ್ನಿಗೂ ಹಿಂಸೆ

ಡ್ರಗ್ಸ್ ಪಾರ್ಟಿಗೆ ಸಹಕರಿಸು ಎಂದು ಪೀಡಿಸಿದ್ದಾನೆ. ಜೊತೆಗೆ ತಾನು ಡ್ರಗ್ಸ್ ಸೇವಿಸೋದನ್ನು ಹೆಂಡತಿ ಕೈಲಿ ವಿಡಿಯೋ ಮಾಡಿಸಿದ್ದಾನೆ. ಅದನ್ನ ಫೇಸ್‌ಬುಕ್‌ಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾನೆ. 

ಬೆಂಗಳೂರು (ಅ. 22): ಇದೊಂದು ಅಪರೂಪದ ಪ್ರಕರಣ. ಡ್ರಗ್ಸ್ ನಶೆ ಏರಿಸಿಕೊಂಡ ಪತಿರಾಯ ಪತ್ನಿ ಹಿಂಸೆ ನೀಡಿದ್ದಾನೆ. ಡ್ರಗ್ಸ್ ಪಾರ್ಟಿಗೆ ಸಹಕರಿಸು ಎಂದು ಪೀಡಿಸಿದ್ದಾನೆ. ಜೊತೆಗೆ ತಾನು ಡ್ರಗ್ಸ್ ಸೇವಿಸೋದನ್ನು ಹೆಂಡತಿ ಕೈಲಿ ವಿಡಿಯೋ ಮಾಡಿಸಿದ್ದಾನೆ. ಅದನ್ನ ಫೇಸ್‌ಬುಕ್‌ಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾನೆ.

ತೆಪ್ಪದ ಮೇಲೆ ನಿಂತು ಬಿಲ್ಡಪ್ ಕೊಟ್ಟ ಪೊಲೀಸಪ್ಪ, ಮೇಕೆ ಮರಿ ಹಿಡಿದುಕೊಂಡು ಸಖತ್ ಪೋಸ್..!

ಯಾರಪ್ಪಾ? ಇಂತಹ ಕೆಲಸ ಮಾಡಿದ ಅಯೋಗ್ಯ ಅಂತೀರಾ? ಈತ ಕೋರಮಂಗಲ ನಿವಾಸಿ ಲೋಹಿತ್ ಎಂಬ ವ್ಯಕ್ತಿಯ ಕತೆ. ಐಟಿ ಕಂಪನಿಯ ಉದ್ಯೋಗಿ. ತಾನು ಸೇವಿಸುವುದಲ್ಲದೇ ಪತ್ನಿಗೂ ಡ್ರಿಂಕ್ಸ್ ಮಾಡು ಎಂದು ಚಿತ್ರಹಿಂಸೆ ನೀಡುತ್ತಿದ್ದ. ಪತಿಯ ವಿರುದ್ಧ ಪತ್ನಿ ದೂರು ನೀಡಿದ್ದಾಳೆ. ಈ ವಿಡಿಯೋ ನೋಡಿದ್ರೆ ನಿಮಗೆ ಅರ್ಥವಾಗುತ್ತದೆ.